ವಿಟ್ಲದ ವ್ಯಕ್ತಿ ಉಪ್ಪಿನಂಗಡಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣು..!

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 26. ವಿಟ್ಲದ ವ್ಯಕ್ತಿಯೋರ್ವ ಉಪ್ಪಿನಂಗಡಿ ಲಾಡ್ಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ವಿಟ್ಲ ಮುಡ್ನೂರು ನಿವಾಸಿ ಮಹಮ್ಮದ್ ಶರೀಪ್ (37) ಎಂದು ಗುರುತಿಸಲಾಗಿದೆ. ನಿನ್ನೆ ಉಪ್ಪಿನಂಗಡಿ ಲಾಡ್ಜ್ ನಲ್ಲಿ ರೂಂ ಪಡೆದಿದ್ದ ಇವರು, ಇಂದು ರೂಂ ಖಾಲಿ ಮಾಡಬೇಕಿತ್ತು. ಅದರೆ ಅವರ ರೂಂ ಬಂದ್ ಆಗಿದ್ದ ಕಾರಣ ಲಾಡ್ಜ್ ಸಿಬ್ಬಂದಿಗಳು ಪರಿಶೀಲನೆ ನಡೆಸಿದಾಗ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಿಳಿದು ಬಂದಿದೆ.

 

 

 

 

Scroll to Top