(ನ್ಯೂಸ್ ಕಡಬ) newskadaba.com ಸಂಪಾಜೆ, ಜ. 25. ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ 62 ಫಲಾನುಭವಿಗಳಿಗೆ 500 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಡ್ರಮ್ ವಿತರಣಾ ಕಾರ್ಯಕ್ರಮವನ್ನು ಸಂಪಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಇಂಗಾಜೆ ಡ್ರಮ್ ವಿತರಿಸುವ ಮೂಲಕ ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿ ಅವರು, ಕುಡಿಯುವ ನೀರನ್ನು ಮಿತವಾಗಿ ಬಳಸಿ. ಈ ಡ್ರಮ್ ಮಾರಾಟ ಮಾಡದೇ ಉತ್ತಮ ರೀತಿಯಲ್ಲಿ ನೀರನ್ನು ಶೇಖರಣೆ ಮಾಡಿ ಸ್ವಚ್ಛತೆಯನ್ನು ಮಾಡಿಕೊಂಡು ಉಪಯೋಗಿಸಿ ಎಂದು ಹೇಳಿ ಗ್ರಾಮ ಪಂಚಾಯತ್ ಪ್ರಸ್ತುತ 2 ನೇ ಬಾರಿ ಡ್ರಮ್ ವಿತರಣೆಯೊಂದಿಗೆ ಉತ್ತಮ ಕೆಲಸ ಮಾಡುವ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಆಡಳಿತ ಮಂಡಳಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಹಾವಿಷ್ಣುಮೂರ್ತಿ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಧರ್ ಮಾದೇಪಾಲ್, ಕಾರ್ಯದರ್ಶಿ ಮಂಜುನಾಥ್, ಸಂಪಾಜೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾದ ತಾಜ್ ಮಹಮ್ಮದ್, ಕೋಶಾಧಿಕಾರಿ ಅಬ್ದುಲ್ ರಹಿಮಾನ್, ರಿಯಾಜ್. ಎಸ್.ಎ. ರುಡಾಲ್ಪ್ ಕ್ರಸ್ತಾ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಪಂಚಾಯತ್ ಅಭಿವೃದಿ ಅಧಿಕಾರಿ ಸರಿತಾ ಡಿಸೋಜಾ, ಸದಸ್ಯರುಗಳಾದ ಜಗದೀಶ್ ರೈ, ಸುಂದರಿ ಮುಂಡಡ್ಕ, ಸುಮತಿ ಶಕ್ತಿವೇಲು, ವಿಮಲಾ ಪ್ರಸಾದ್, ಅನುಪಮಾ, ಸುಶೀಲ ಕೈಪಡ್ಕ, ಅಬೂಸಾಲಿ ಪಿ. ಕೆ, ಹನೀಫ್ ಎಸ್. ಕೆ, ಸವಾದ್ ಗೂನಡ್ಕ, ಗ್ರಾಮ ಸಹಾಯಕ ಸೋಮನಾಥ್, ಯೂಸುಫ್ ಕಲ್ಲುಗುಂಡಿ, ಉಮೇಶ್ ಕನಪಿಲ, ಅಂಗನವಾಡಿ ಕಾರ್ಯಕರ್ತೆ ಧರ್ಮಕಲಾ, ಉಷಾ ರಾಮನಾಯ್ಕ್, ಅಬೂಬಕ್ಕರ್ ಎಮ್.ಸಿ, ಗುರುವಪ್ಪ ಕಡೆಪಾಲ, ಪಂಚಾಯತ್ ಸಿಬ್ಬಂದಿ ವರ್ಗದ ಗೋಪಮ್ಮ, ಭರತ್, ಮಧುರಾ, ಸವಿತಾ ಕಿಶೋರ್, ಪ್ರೀತಮ್, ಹರ್ಷಿತ್ ಹಾಗೂ ಪಲಾನುಭವಿಗಳು ಹಾಜರಿದ್ದರು.