ಕಡಬ: ವಾಸ್ತವ್ಯ ಪರವಾನಿಗೆ ಪಡೆದುಕೊಂಡು ವ್ಯಾಪಾರ ನಡೆಸುತ್ತಿರುವ ಆರೋಪ ➤ ವೆಲ್ ನೆಸ್ ಸೆಂಟರ್ ಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ದಿಢೀರ್ ಭೇಟಿ – ಪರಿಶೀಲನೆ

ಕಡಬ, ಜ.12. ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಜೆ.ಪಿ.ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ವೆಲ್ ನೆಸ್ ಸೆಂಟರ್ ಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ ಅವರು ವೆಲ್ ಸೆಂಟರ್ ಗೆ ಎಚ್ಚರಿಕೆ ನೀಡಿದ ಘಟನೆ ಮಂಗಳವಾರದಂದು ನಡೆದಿದೆ.

ಜೆ.ಪಿ. ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವಾಸ್ತವ್ಯ ಪರವಾನಿಗೆ ಪಡೆದುಕೊಂಡು ವ್ಯಾಪಾರ ನಡೆಸುತ್ತಿರುವ ಬಗ್ಗೆ ಪಟ್ಟಣ ಪಂಚಾಯತ್ ಗೆ ಮಾಹಿತಿ ಬಂದ ಮೇರೆಗೆ ಅಧಿಕಾರಿಗಳು ಭೇಟಿ ನೀಡಿದ್ದರು. ಈ ಸಂದರ್ಭ ವೆಲ್ ನೆಸ್ ಎಂಬ ಸಂಸ್ಥೆಯವರನ್ನು ವಿಚಾರಿಸಿ ವಾಸ್ತವ್ಯ ಇರುವುದು ಮತ್ತು ವ್ಯಾಪಾರ ನಡೆಸುವುದು ಒಂದೇ ಕೊಠಡಿಯಲ್ಲಿ ಸಾಧ್ಯವಿಲ್ಲ. ನೀವು ವ್ಯಾಪಾರ ವ್ಯವಹಾರ ಇನ್ನೊಂದು ಕೊಠಡಿಯಲ್ಲಿ ಮಾಡಿಕೊಳ್ಳಬೇಕೆಂದು ಹೇಳಿದರು. ವೆಲ್ ನೆಸ್ ಸೆಂಟರ್ ನಲ್ಲಿ ಆರೋಗ್ಯ ವರ್ಧಕ ಜ್ಯೂಸ್ ಗಳನ್ನು ನೀಡಲಾಗುವ ಬಗ್ಗೆ ಮುಖ್ಯಾಧಿಕಾರಿ ಮಾಹಿತಿಗಳನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸಿಬ್ಬಂದಿ ಹರೀಶ್ ಬೆದ್ರಾಜೆ ಸೇರಿದಂತೆ ಕಟ್ಟಡದ ಮಾಲಕ ಜೋಸ್ ಪ್ರಕಾಶ್ ಉಪಸ್ಥಿತರಿದ್ದರು.

Also Read  ಆಗಸ್ಟ್ 30 ರಂದು ಮೇಯರ್ ನೇರ ಫೋನ್–ಇನ್

 

 

error: Content is protected !!
Scroll to Top