ಕಡಬ: ನಿವೃತ್ತ ಸೈನಿಕ ಮಲಗಿದ ಸ್ಥಿತಿಯಲ್ಲೇ ಮೃತ್ಯು.!

(ನ್ಯೂಸ್ ಕಡಬ) newskadaba.com ಕಡಬ, ಡಿ. 18. ನಿವೃತ್ತ ಸೈನಿಕರೋರ್ವರು ಮಲಗಿದ ಸ್ಥಿತಿಯಲ್ಲೇ ಮೃತಪಟ್ಟ ಘಟನೆ ಕೋಡಿಂಬಾಳ ಗ್ರಾಮದ ಕುದುಂಬೂರು ಸಮೀಪ ಶುಕ್ರವಾರದಂದು ಸಂಜೆ ವರದಿಯಾಗಿದೆ.

ಮೃತರನ್ನು ನೂಜಿಬಾಳ್ತಿಲ ಕನ್ವರೆ ಸಮೀಪದ ವೇಳಿಕಲ್ ನಿವಾಸಿ ನಿವೃತ್ತ ಸೈನಿಕ ಯೋಹನ್ನಾನ್ (50) ಎಂದು ಗುರುತಿಸಲಾಗಿದೆ. ಇವರು ಕಳೆದ ರಾತ್ರಿಯೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇವರು ಮನೆಯಲ್ಲಿ ಓರ್ವರೇ ಇದ್ದು ಮನೆಯ ಎದುರಿನ ಲೈಟ್ ಹಾಕಲಾಗಿತ್ತು. ಹಗಲು ವೇಳೆಯಲ್ಲೂ ಲೈಟ್ ಉರಿಯುತ್ತಿದ್ದು ಚಿಲಕ ಹಾಕಿದ್ದರಿಂದ ಸ್ಥಳೀಯರಿಗೆ ಸಂಶಯ ಬಂದು ಬಾಗಿಲು ತೆಗೆದು ನೋಡಿದಾಗ ಮೃತಪಟ್ಟಿರುವುದು ಕಂಡುಬಂದಿದೆ.

 

Scroll to Top