ಸಂಬಂಧಿಕರ ಮನೆಗೆ ತೆರಳಿ ಅಲ್ಲಿಂದ ನಾಪತ್ತೆಯಾಗಿದ್ದ ಪೆರಾಬೆ ನಿವಾಸಿ ಕಲ್ಲಡ್ಕದಲ್ಲಿ ಪತ್ತೆ..!

(ನ್ಯೂಸ್ ಕಡಬ) newskadaba.com ವಿಟ್ಲ, ಡಿ. 18. ಮಾಣಿಯಲ್ಲಿರುವ ಸಂಬಂಧಿಕರ ಮನೆಗೆಂದು ಹೋಗಿ ನಾಪತ್ತೆಯಾಗಿದ್ದ ಕಡಬ ತಾಲೂಕಿನ ಪೆರಾಬೆ ಕೇವಳ ನಿವಾಸಿ ಶ್ಯಾಮ್ ಶೆಟ್ಟಿ ಅವರು ಕಲ್ಲಡ್ಕ ಸಮೀಪ ಪತ್ತೆಯಾಗಿದ್ದಾರೆ.

ಇವರು ಡಿ. 16ರಂದು ಬೆಳಗ್ಗೆ ಮಾಣಿ ಗ್ರಾಮದ ಉದ್ದ ಎಂಬಲ್ಲಿ‌ ತನ್ನ ಸಂಬಂಧಿಕರ ಮನೆಯಿಂದ ಪೇಟೆಗೆಂದು ಹೋಗಿದ್ದ ಬಳಿಜ ಮನೆಗೆ ಮರಳದೆ ನಾಪತ್ತೆಯಾಗಿದ್ದರು. ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಹುಡುಕಾಟ ನಡೆಸಿದಾಗ ಕಲ್ಲಡ್ಕ ಸಮೀಪ ಅವರು ಪತ್ತೆಯಾಗಿದ್ದಾರೆ ಎನ್ನಲಾಗಿದೆ.

Scroll to Top