(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 18. ಮೈದಾ ಹಿಟ್ಟು ಖರೀದಿ ಮಾಡಲು ಇದೆ ಎಂದು ನಂಬಿಸಿ ಆರ್ಮಿಯಲ್ಲಿ ದುಡಿಯುತ್ತಿರುವ ಅಮನ್ ಎಂದು ಪರಿಚಯಿಸಿ ವ್ಯಕ್ತಿಯೋರ್ವ ಬ್ಯಾಂಕ್ ಖಾತೆಯಿಂದ 2,94,830 ರೂ. ವರ್ಗಾಯಿಸಿ ವಂಚನೆ ಮಾಡಿರುವ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ಮಹಿಳೆಯೊಬ್ಬರು ಯೂನಿಯನ್ ಬ್ಯಾಂಕ್ ಪದವು ಬ್ರಾಂಚ್ ನಲ್ಲಿ ಖಾತೆಯನ್ನು ಹೊಂದಿದ್ದು, ಇವರ ಪತಿ ಫ್ಲೋರ್ ಮಿಲ್ ಒಂದರಲ್ಲಿ ಉದ್ಯೋಗಿಯಾಗಿದ್ದರು. ಮಹಿಳೆಯ ಮೊಬ್ಯೆಲ್ ಗೆ ವ್ಯಕ್ತಿಯೋರ್ವ ಆರ್ಮಿಯಲ್ಲಿ ದುಡಿಯುತ್ತಿರುವ ಅಮನ್ ಎಂದು ಪರಿಚಯಿಸಿ ಮೈದಾ ಹಿಟ್ಟು ಖರೀದಿಸುವುದಾಗಿ ತಿಳಿಸಿ, ಹಣ ಪಾವತಿಸಲು ಕ್ಯೂ ಆರ್ ಕೋಡ್ ಕಳುಹಿಸಲು ತಿಳಿಸಿದ್ದಾರೆ. ಪತಿ ಹಾಗೂ ಕಂಪನಿಯ ಮೊಬೈಲ್ ನಲ್ಲಿ ಯಾವುದೇ ಕ್ಯೂ ಆರ್ ಕೋಡ್ ಇಲ್ಲದ ಕಾರಣ ಮಹಿಳೆ ತನ್ನ ಮೊಬೈಲ್ ನಂಬರ್ ನೀಡಿದ್ದು, ಬಳಿಕ ಅಪರಿಚಿತ ವ್ಯಕ್ತಿಯು ಮಹಿಳೆಯ ಮೊಬೈಲ್ ಗೆ ಸಂಪರ್ಕಿಸಿ, ಕ್ಯೂ ಆರ್ ಕೋಡ್ ಕೇಳಿ ಹಂತ ಹಂತವಾಗಿ 2,94,830 ರೂ. ಗಳನ್ನು ತನ್ನ ಖಾತೆಗೆ ವರ್ಗಾಯಿಸಿರುವುದಾಗಿ ಎಂದು ತಿಳಿದುಬಂದಿದೆ. ಈ ಕುರಿತು ಸೈಬರ್ ಕ್ರೈಮ್ ಠಾಣೆಗೆ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.