(ನ್ಯೂಸ್ ಕಡಬ) newskadaba.com ಜಿದ್ದಾ, ಡಿ. 01. ಕೊರೋನಾ ರೂಪಾಂತರಿ ತಳಿ ಒಮಿಕ್ರಾನ್ ಮೊದಲ ಪ್ರಕರಣವನ್ನು ಪತ್ತೆ ಹಚ್ಚಿರುವುದಾಗಿ ಸೌದಿ ಅರೇಬಿಯಾ ಆರೋಗ್ಯ ಇಲಾಖೆ ಬಹಧವಾರದಂದು ತಿಳಿಸಿದೆ.
ಉತ್ತರ ಆಫ್ರಿಕಾದ ನಾಗರಿಕನ ಮೂಲಕ ಪ್ರಕರಣ ಬೆಳಕಿಗೆ ಬಂದಿದ್ದು, ಆತನನ್ನು ಮತ್ತು ಆತನ ನಿಕಟ ಸಂಪರ್ಕದಲ್ಲಿ ಇರುವವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ವರದಿ ತಿಳಿಸಿದೆ.