(ನ್ಯೂಸ್ ಕಡಬ) newskadaba.com ಜಿದ್ದಾ, ನ. 27. ಸೌದಿ ಅರೇಬಿಯಾವು ದಕ್ಷಿಣ ಆಫ್ರಿಕಾದ ಏಳು ರಾಷ್ಟ್ರಗಳಿಂದ ನೇರ ಪ್ರಯಾಣವನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಿದೆ.
ಸೌದಿ ಸರಕಾರವು ದಕ್ಷಿಣ ಆಫ್ರಿಕಾ, ನಮೀಬಿಯಾ, ಲೆಸೊಥೋ, ಇಸ್ವಾಟಿನಿ, ಜಿಂಬಾಬ್ವೆ, ಮೊಜಾಂಬಿಕ್ ಹಾಗೂ ಬೋಟ್ಸ್ವಾನಾದಿಂದ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ ಎಂದು ಸೌದಿ ಸರಕಾರ ಸ್ಪಷ್ಟೀಕರಣ ನೀಡಿದೆ. ಅಧಿಕೃತ ಮೂಲಗಳ ಪ್ರಕಾರ ಈ ಏಳು ದೇಶಗಳಿಂದ ಸೌದಿಗೆ ಪ್ರಯಾಣ ಬಯಸುವವರು ಪ್ರಯಾಣ ನಿಷೇಧವಿಲ್ಲದ ಮೂರನೇ ದೇಶದಲ್ಲಿ 14 ದಿನಗಳ ಕ್ವಾರೆಂಟೈನ್ ಪೂರ್ತಿಗೊಳಿಸಿದ ನಂತರ ಸೌದಿಯನ್ನು ಪ್ರವೇಶಿಸಬಹುದಾಗಿದೆ ಎಂದು ಹೇಳಿದೆ.