(ನ್ಯೂಸ್ ಕಡಬ) newskadaba.com ಕಡಬ, ನ. 27. ದೇಶದ ಜಾತ್ಯಾತೀತ ಪರಂಪರೆ, ಮಾನವ ಹಕ್ಕು, ಪ್ರಜಾಪ್ರಭುತ್ವ ಮತ್ತು ಸಾಂವಿಧಾನಿಕ ಮೌಲ್ಯಗಳ ಸಂರಕ್ಷಣೆಗಾಗಿ ಸಂವಿಧಾನ ದೀಕ್ಷೆ ಕಾರ್ಯಕ್ರಮವು ಕಡಬ ತಹಶೀಲ್ದಾರ್ ಕಛೇರಿಯ ಮುಂಭಾಗದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ಡಿಪಿಐ ರಾಜ್ಯ ಸಮಿತಿ ಕಾರ್ಯದರ್ಶಿ ಆನಂದ ಮಿತ್ತಬೈಲ್, ಸಂವಿಧಾನದ ಪೀಠಿಕೆಯ ಕರಡನ್ನು ಭೋಧಿಸಿ ಮಾತನಾಡಿದರು. ಇನ್ನೋರ್ವ ಅತಿಥಿ ಎಸ್ಡಿಪಿಐ ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ವಿಕ್ಟರ್ ಮಾರ್ಟಿಸ್ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಎಸ್ಡಿಪಿಐ ಕಡಬ ಬ್ಲಾಕ್ ಸಮಿತಿ ಅಧ್ಯಕ್ಷರಾದ ಬಶೀರ್ ಹಲ್ಯಾರ ಸಂವಿಧಾನದ ಬಗ್ಗೆ ಅನೇಕ ವಿವರಗಳನ್ನು ಮಂಡಿಸಿದರು.
ಕಾರ್ಯಕ್ರಮದಲ್ಲಿ ಕಡಬ ಎಸ್‌ಡಿಪಿಐ ಬ್ಲಾಕ್ ಸಮಿತಿಯ ಉಪಾಧ್ಯಕ್ಷರಾದ ರಮ್ಲ ಸನ್ ರೈಸ್, ಅಬ್ಬಾಸ್ ಕೋಡಿಂಬಾಳ, ಬೂತ್ ಸಮಿತಿ ಅಧ್ಯಕ್ಷರಾದ ಸುಂದರ, ದಲಿತ ಮುಖಂಡರಾದ ಉಮೇಶ್ ಕೋಡಿಂಬಾಳ, ಕಡಬ ಎಸ್ಡಿಪಿಐ ನಾಯಕರಾದ ನೌಷಾದ್, ಸಮದ್ ಕೋಡಿಂಬಾಳ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸಂವಿಧಾನದ ಪೀಠಿಕೆಯ ಕರಡನ್ನು ಸರ್ವರಿಗೂ ಹಂಚಲಾಯಿತು. ಎಸ್ಡಿಪಿಐ ಕಡಬ ಬ್ಲಾಕ್ ಸಮಿತಿ ಕಾರ್ಯದರ್ಶಿ ಅಬ್ದುಲ್ ನಬಿ ಸ್ವಾಗತಿಸಿದರು. ಕಡಬ ಪಟ್ಟಣ ಪಂಚಾಯತ್ ಸಮಿತಿ ಅಧ್ಯಕ್ಷ ಹಂಝ ರವರು ಧನ್ಯವಾದಗೈದರು.