ಆಕ್ಟಿವಾ ಹಾಗೂ ಓಮ್ನಿ ಕಾರು ನಡುವೆ ಢಿಕ್ಕಿ ➤ ಓರ್ವನಿಗೆ ಗಾಯ



(ನ್ಯೂಸ್ ಕಡಬ) newskadaba.com. ವೇಣೂರು, ನ. 27. ದ್ವಿಚಕ್ರ ವಾಹನ ಮತ್ತು ಒಮ್ನಿ ಕಾರು ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರನೋರ್ವ ಗಾಯಗೊಂಡ ಘಟನೆ ಗೋಳಿಯಂಗಡಿ ಎಂಬಲ್ಲಿ ನಡೆದಿದೆ.








ಗಾಯಾಳುವನ್ನು ಆಕ್ಟಿವಾ ಸವಾರ ಗೋಳಿಯಂಗಡಿ ನಿವಾಸಿ ಆನಂದರವರ ಪುತ್ರ ಅಂಕಿತ್ ಎಂದು ಗುರುತಿಸಲಾಗಿದೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಕಿತ್ ರವರು ತಮ್ಮ ಆಕ್ಟಿವಾ ವಾಹನದಲ್ಲಿ ಮೂಡಬಿದ್ರಿಯಿಂದ ಕುಕ್ಕೇಡಿ ಕಡೆಗೆ ಬರುತ್ತಿದ್ದ ಸಂದರ್ಭ ಬೆಳ್ತಂಗಡಿ ಕಡೆಯಿಂದ ವೇಣೂರು ಕಡೆ ಬರುತ್ತಿದ್ದ ಒಮ್ನಿ ಕಾರು ನಡುವೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಹಾಗೂ ಒಮ್ನಿ ಕಾರಿನ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ವೇಣೂರು ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






 

error: Content is protected !!
Scroll to Top