ಸಮುದ್ರದ ಅಲೆಗಳ ಹೊಡೆತಕ್ಕೆ ಬೋಟ್ ಮುಳುಗಡೆ ➤ ಏಳು ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾರವಾರ, ನ. 18. ಮೀನುಗಾರಿಕೆಗೆಂದು ತೆರಳಿದ್ದ ಮಲ್ಪೆಯ ಎರಡು ಬೋಟುಗಳು ಹವಾಮಾನ ವೈಪರೀತ್ಯದಿಂದಾಗಿ ಗೋವಾದ ಪಣಜಿ ಬಳಿಯ ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗಡೆಯಾದ ಘಟನೆ ನಡೆದಿದೆ.

ಮಲ್ಪೆಯಿಂದ ಗೋವಾಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೂರು ಬೋಟ್‌ಗಳು ಅಲೆಗಳ ಹೊಡೆತಕ್ಕೆ ಸಿಲುಕಿದ್ದು, ಈ ವೇಳೆ ಇಂಜಿನ್ ಸಹ ಕೈ ಕೊಟ್ಟಿದೆ ಎನ್ನಲಾಗಿದೆ. ಮಾತಾ ಜಟಗೇಶ್ವರ ಮತ್ತು ಪಲ್ಲಕ್ ಎಂಬ ಹೆಸರಿನ ಬೋಟ್ ಮುಳುಗಡೆಯಾಗಿದ್ದು, ಇದರಲ್ಲಿದ್ದ ಏಳು ಮಂದಿಯನ್ನು, ಸ್ಥಳೀಯ ಮೀನುಗಾರರು ಹಾಗೂ ಗೋವಾದ ಕೋಸ್ಟ್ ಗಾರ್ಡ್ ಪೊಲೀಸರು ರಕ್ಷಣೆ ಮಾಡಿ ವಾಸ್ಕೋಗೆ ಕರೆತಂದಿದ್ದಾರೆ‌ ಎಂದು ತಿಳಿದುಬಂದಿದೆ.

Also Read  ಹುಬ್ಬಳ್ಳಿಗೆ ನಾಳೆ  ಪ್ರಧಾನಿ ನರೇಂದ್ರ ಮೋದಿ  ➤  ಯುವಜನ ಉತ್ಸವಕ್ಕೆ ಚಾಲನೆ 

error: Content is protected !!
Scroll to Top