ಮಂಗಳೂರು: ಸಮುದ್ರ ಪಾಲಾಗಿದ್ದ ಯುವಕನ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಸುರತ್ಕಲ್, ನ. 05. ಗೆಳೆಯರ ಜೊತೆ ವಿಹಾರಕ್ಕೆಂದು ಬಂದು ಕಪ್ಪೆ ಚಿಪ್ಪಿ ಹೆಕ್ಕುತ್ತಿದ್ದ ಸಂದರ್ಭ ಸಮುದ್ರಪಾಲಾದ ಯುವಕನ ಮೃತದೇಹವು ಸುರತ್ಕಲ್ ಠಾಣೆಯ ಚಿತ್ರಾಪುರ ಕಡಲ ತೀರದಲ್ಲಿ ಪತ್ತೆಯಾಗಿದೆ.


ಮೃತ ಯುವಕನನ್ನು ಸರಿಪಳ್ಳ ನಿವಾಸಿ ತಿಲಕ್ ರಾಜ್ (20) ಎಂದು ಗುರುತಿಸಲಾಗಿದೆ. ವಿಹಾರಕ್ಕೆಂದು ಗೆಳೆಯರ ಜೊತೆ ಬಂದಿದ್ದ ಈತ, ಮಂಗಳೂರು ಹೊರವಲಯದ ತಣ್ಣೀರುಬಾವಿ ಸಮುದ್ರ ತೀರದಲ್ಲಿ ಕಪ್ಪೆ ಚಿಪ್ಪು ಹೆಕ್ಕುತ್ತಿದ್ದ ವೇಳೆ ಸಮುದ್ರ ಪಾಲಾಗಿದ್ದು, ಇದೀಗ ಆತನ ಮೃತದೇಹವು ಪತ್ತೆಯಾಗಿದೆ. ಈ ಕುರಿತು ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.

Scroll to Top