ವಾಮದಪದವು: “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಾಗಾರ ಉದ್ಘಾಟನೆ

(ನ್ಯೂಸ್ ಕಡಬ) Newskadaba.com ವಾಮದಪದವು, ನ. 01. ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕ ಆಯೋಜನೆಯ ಜೈ ತುಳುನಾಡ (ರಿ.) ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟಿ ಆಶ್ರಯದಲ್ಲಿ ಉಚಿತ “ಬಲೆ ತುಳು ಲಿಪಿ ಕಲ್ಪುಗ” ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ವಾಮದಪದವು ಸಹನಾ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ತುಳು ಲಿಪಿ ಶಿಕ್ಷಕರು ಹಾಗೂ ಜೈ ತುಳುನಾಡ (ರಿ.) ಸಂಘಟನೆಯ ಜತೆ ಸಂಘಟನಾ ಕಾರ್ಯದರ್ಶಿ ಜಗದೀಶ ಗೌಡ ಕಲ್ಕಳ ಅಧ್ಯಕ್ಷತೆಯಲ್ಲಿ, ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ಅಧ್ಯಕ್ಷರಾದ ದೇವಿಪ್ರಸಾದ್ ಶೆಟ್ಟಿ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ತುಳು ಲಿಪಿ ಶಿಕ್ಷಕಿ ಪೂರ್ಣಿಮಾ ಬಂಟ್ವಾಳ ತುಳು ಲಿಪಿಯಲ್ಲಿ ಬರೆಯುವ ಮೂಲಕ ಕಲಿಕಾ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜೈ ತುಳುನಾಡ ಸಂಘಟನೆಯ ಜತೆ ಸಂಘಟನಾ ಕಾರ್ಯದರ್ಶಿ ಅಶ್ರಫ್ ಬಸ್ತಿಕೋಡಿ, ವಾಮದಪದವು ವ್ಯವಸಾಯ ಸೇವಾ ಸಹಕಾರಿ ಸಂಘ ಇದರ ಅಧ್ಯಕ್ಷರಾದ ಕಮಲ್ ಶೆಟ್ಟಿ, ತುಳು ಲಿಪಿ ಶಿಕ್ಷಕರಾದ ದಿವ್ಯ ಸಿದ್ದಕಟ್ಟೆ ಉಪಸ್ಥಿತರಿದ್ದರು. ತುಳು ಲಿಪಿ ಶಿಕ್ಷಕರಾದ ಜಗದೀಶ ಗೌಡ ಕಲ್ಕಳ, ಪೂರ್ಣಿಮಾ ಬಂಟ್ವಾಳ, ದಿವ್ಯ ಸಿದ್ಧಕಟ್ಟೆ ಶಿಕ್ಷಕರಾಗಿ ಕಾರ್ಯಾಗಾರ ನಡೆಸಿಕೊಟ್ಟರು. ಶೌಕತ್ ಅಲಿ ಕಾರ್ಯಕ್ರಮ ನಿರೂಪಿಸಿದರು. 25 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮೊದಲ ದಿನವೇ ತುಳು ಲಿಪಿ ಕಲಿಕಾ ತರಗತಿಗೆ ಹಾಜರಾಗಿದ್ದರು. ಮುಂದಿನ 4 ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಸರಿಯಾಗಿ “ಬಲೆ ತುಲು ಲಿಪಿ ಕಲ್ಪುಗ” ಕಾರ್ಯಗಾರ ನಡೆಯಲಿದ್ದು, ನಂತರ ಪರೀಕ್ಷೆ ನಡೆಸಿ ಪ್ರಮಾಣಪತ್ರ ನೀಡಲಾಗುವುದು, ಹಾಗೂ ಇದು ಉಚಿತ ಕಾರ್ಯಗಾರವಾಗಿದ್ದು ಸಾರ್ವಜನಿಕರು ಪಾಲ್ಗೊಳ್ಳಬಹುದು ಎಂದು ಸಂಘಟಕರು ತಿಳಿಸಿದರು.

error: Content is protected !!

Join the Group

Join WhatsApp Group