ಕಡಬದಲ್ಲಿ ಹಾಡಹಗಲೇ ಅವ್ಯಾಹತವಾಗಿ ನಡೆಯುತ್ತಿದೆ ಕೋಳಿ ಅಂಕ ➤ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಸಲು ಅನುಮತಿ ನೀಡಿದ್ದಾದರೂ ಯಾರು..?

ಕಡಬ, ಅ.31. ಠಾಣಾ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ ಗುರಿಯಡ್ಕ ಎಂಬಲ್ಲಿ ಇದೀಗ ದೊಡ್ಡ ಮಟ್ಟದ ಕೋಳಿ ಅಂಕ ನಡೆಯುತ್ತಿದ್ದು, ಇದು ಅಧಿಕೃತವೋ ಅಥವಾ ಅನಧಿಕೃತವೋ ಎಂದು ತಿಳಿದು ಬಂದಿಲ್ಲ.

ಕೋಳಿ ಅಂಕದಲ್ಲಿ ಜನ ಜಾತ್ರೆಯೇ ಕಂಡು ಬಂದಿದ್ದು, ಇಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಸಲಾಗುತ್ತಿದೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೋಳಿ ಅಂಕ ಅವ್ಯಾಹತವಾಗಿ ನಡೆಯುತ್ತಿದ್ದು ಇದು ಇಲಾಖೆಯ ಕೃಪಾ ಕಟಾಕ್ಷದಿಂದಲೇ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೋಳಿ ಅಂಕದ ಸ್ಥದಲ್ಲಿ ಶಾಮಿಯಾನ ಹಾಕಿ ವ್ಯವಸ್ಥಿತವಾಗಿ ನಡೆಯುತ್ತಿದ್ದು ವಾಹನಗಳು ಸೇರಿದಂತೆ ಜನ ಜಾತ್ರೆಯೇ ಸೇರಿದೆ. ಇಂತಹ ಕೋಳಿ ಅಂಕಗಳು ಅಧಿಕೃತವೋ ಅಥವಾ ಅನಧಿಕೃತವೋ ಎಂಬ ಸಂಶಯ ಮೂಡಿದೆ. ಒಂದು ವೇಳೆ ಅನಧಿಕೃತವಾದರೆ ಪೋಲಿಸ್ ಇಲಾಖೆಯ ಕೃಪಾ ಕಟಾಕ್ಷದಿಂಲೇ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಕೋಡಿಂಬಾಳ ಅಲ್ಲದೆ ಕಡಬ ಠಾಣಾ ವ್ಯಾಪ್ತಿಯ ಇತರೆಡೆಗಳಲ್ಲಿ ಕೋಳಿ ಅಂಕಗಳು ನಡೆಯುತ್ತಿರುವುದು ಕಂಡು ಬಂದಿದೆ. ಊರಿನ ಜಾತ್ರಾ ಸಮಯದಲ್ಲಿ ನಡೆಯುವ ಸಂಪ್ರದಾಯ ಕೋಳಿ ಅಂಕವನ್ನು ಹೊರತುಪಡಿಸಿ ಈ ರೀತಿಯಲ್ಲಿ ಹಣವನ್ನು ಪಣಕ್ಕಿಟ್ಟು ಕೋಳಿ ಅಂಕ ನಡೆಯುತ್ತಿದ್ದರೂ ಪೋಲಿಸ್ ಇಲಾಖೆ ಯಾಕೆ ಮೌನವಾಗಿದೆ ಎಂದು ತಿಳಿಯುತ್ತಿಲ್ಲ. ಇಲಾಖೆಯೇ ಇದಕ್ಕೆ ಉತ್ತರ ನೀಡಬೇಕಿದೆ.

 

 

 

error: Content is protected !!

Join the Group

Join WhatsApp Group