ಕಾಲೇಜು ವಿದ್ಯಾರ್ಥಿ ನಾಪತ್ತೆ ಪ್ರಕರಣ ➤ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಸೆ.22. ಇಲ್ಲಿನ ರಾಮಕುಂಜೇಶ್ವರ ವಸತಿ ನಿಲಯದಿಂದ ಕಾಲೇಜಿಗೂ ಹೋಗದೆ, ಮನೆಗೂ ತೆರಳದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಯೋರ್ವ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ.

ಚಿಕ್ಕಮಗಳೂರು ನಿವಾಸಿ, ರಾಮಕುಂಜೇಶ್ವರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಅಂಜನ್ ಸಿ.ಎಂ. ಎಂಬಾತ ಮಂಗಳವಾರದಂದು ಕಾಲೇಜಿಗೆ ತೆರಳದೆ ಹಾಸ್ಟೆಲ್ ನಿಂದ ನಾಪತ್ತೆಯಾಗಿದ್ದು, ಈ ಬಗ್ಗೆ
ಆತನ ಮನೆಯಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ವಿಚಾರಿಸಲಾಗಿ ಪತ್ತೆಯಾಗದ ಹಿನ್ನೆಲೆಯಲ್ಲಿ ಅಂಜನ್ ನನ್ನು ಅಪಹರಿಸಿರಬಹುದು ಎಂಬ ಸಂಶಯ ವ್ಯಕ್ತಪಡಿಸಿ ಹಾಸ್ಟೆಲ್ ಮ್ಯಾನೇಜರ್ ಕಡಬ ಠಾಣೆಗೆ ದೂರು ನೀಡಿದ್ದರು‌. ಈ ನಡುವೆ ಅಂಜನ್ ಊರಿಗೆ ತೆರಳುವುದಾಗಿ ತನ್ನ ಗೆಳೆಯರಲ್ಲಿ ಹೇಳಿದ್ದು, ಬುಧವಾರ ಬೆಳಿಗ್ಗೆ ಬೆಂಗಳೂರಿನ ಸಂಬಂಧಿಕರ ಮನೆಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.

Also Read  ಮಂಗಳೂರು: ಅನಧಿಕೃತ ಮಾಂಸ ಮಾರಾಟ ಕಂಡು ಬಂದಲ್ಲಿ ಪರವಾನಿಗೆ ರದ್ದು

 

 

 

error: Content is protected !!