ಅಪ್ರಾಪ್ತ ಬಾಲಕಿ ಬಟ್ಟೆ ಬದಲಿಸುವ ವೇಳೆ ವೀಡಿಯೋ ಮಾಡಿ ಬ್ಲ್ಯಾಕ್‌ಮೇಲ್ ➤ ಎರಡು ತಿಂಗಳಿನಿಂದ ನಿರಂತರ ಅತ್ಯಾಚಾರ, ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಚಿಕ್ಕಮಗಳೂರು, ಸೆ.15. ಬಾಲಕಿಯೊಬ್ಬಳು ಬಟ್ಟೆ ಬದಲಾಯಿಸುವುದನ್ನು ವಿಡಿಯೋ ಚಿತ್ರೀಕರಣ ಮಾಡಿ, ಆ ಬಳಿಕ ಆಕೆಯನ್ನು ಬೆದರಿಸಿ, ನಿರಂತರ ಅತ್ಯಾಚಾರ ನಡೆಸಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬಾಲಕಿಯನ್ನು ಕರೆದಾಗ ಬಾರದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿ, ಎರಡು ತಿಂಗಳಿಂದ ಅತ್ಯಾಚಾರ ನಡೆಸಿದ್ದು, ಮುಖ್ಯ ಆರೋಪಿ ಅನಿಲ್ ನಾಯ್ಕ್ ನ ಜತೆ ಗ್ರಾಮದ ಕಾರ್ತಿಕ್ ಎಂಬುವವನಿದ್ದ ಎನ್ನಲಾಗಿದೆ. ಗಣಪತಿ ವಿಸರ್ಜನೆ ವೇಳೆ ವಿಡಿಯೋ ಬಗ್ಗೆ ಯುವಕರು ಮಾತಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಪ್ರಾಪ್ತೆ ಬಾಲಕಿಯು ಸಖರಾಯಪಟ್ಟಣ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳಾದ ಅನಿಲ್ ನಾಯ್ಕ್ , ಬಾಲಾಜಿಯನ್ನು ಬಂಧಿಸಿದ್ದಾರೆ. ಒಟ್ಟು ನಾಲ್ವರ ಮೇಲೆ ಪ್ರಕರಣ ದಾಖಲಾಗಿದ್ದು, ಕಾರ್ತಿಕ್, ಅಖಿಲೇಶ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Also Read   ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಡಿ. ಹನುಮಂತಯ್ಯ ಆಯ್ಕೆ

 

 

 

error: Content is protected !!
Scroll to Top