ಕೊಲ್ಲಮೊಗ್ರು ಗ್ರಾ.ಪಂ ನಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಆ.15. ಕೊಲ್ಲಮೊಗ್ರು ಗ್ರಾ.ಪಂ ನಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.

ಗ್ರಾ.ಪಂ ಅಧ್ಯಕ್ಷರಾದ ಉದಯ ಕೊಪ್ಪಡ್ಕ ಧ್ವಜಾರೋಹಣ ಮಾಡಿದರು. ಬಳಿಕ ನಿವೃತ್ತ ಯೋಧರಾದ ಪದ್ಮನಾಭ ಗೌಡ ಗೋಳ್ಯಾಡಿ, ಸತೀಶ್ ಜಾಲುಮನೆ ಅವರನ್ನು ಗೌರವಿಸಲಾಯಿತು. ಕೆ.ವಿ.ಜಿ. ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್ ವಾದ್ಯಗಳನ್ನು ನುಡಿಸಿದರು. ಪಿಡಿಒ ರವಿಚಂದ್ರ ಎ, ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ, ಗ್ರಾ.ಪಂ ಉಪಾಧ್ಯಕ್ಷರಾದ ಜಯಶ್ರೀ ಚಾಂತಾಳ, ಸದಸ್ಯರಾದ ಶಿವಮ್ಮ ಕಟ್ಟ, ಮೋಹಿನಿ ಕಟ್ಟ, ಶುಭಲತಾ ಕಟ್ಟ, ಸಿಬ್ಬಂದಿಗಳಾದ ಸಂತೋಷ್ ಗಡಿಕಲ್ಲು, ವಸಂತ ಕೊರಂಬಟ, ನವ್ಯ ಮಲ್ಲಾರ, ಲೀಲಾವತಿ ಶಿರೂರು, ಸುಳ್ಯ ಎಪಿಎಂಸಿ ಸದಸ್ಯರಾದ ಗಣೇಶ್ ಭಟ್ ಇಡ್ಯಡ್ಕ, ಮಾಜಿ ಅಧ್ಯಕ್ಷರಾದ ಸತೀಶ್ ಟಿ.ಎನ್., ಮಾಜಿ ಉಪಾಧ್ಯಕ್ಷರಾದ ಮಣಿಕಂಠ ಕಟ್ಟ, ಅಂಗನವಾಡಿ ಕಾರ್ಯಕರ್ತೆಯರು ನಳಿನಿ ಕೊಲ್ಲಮೊಗ್ರು, ನೇತ್ರಾವತಿ ಕಲ್ಮಕಾರು, ಅಂಗನವಾಡಿ ಸಹಾಯಕಿಯರಾದ ಮಾಲಿನಿ, ಕೆ ವಿ ಜಿ ಪ್ರೌಢ ಶಾಲೆ ದೈಹಿಕ ಶಿಕ್ಷಕರಾದ ಬಾಲಕೃಷ್ಣ, ಸಂಜೀವಿನಿ ಸ್ವ-ಸಹಾಯ ಸಂಘದ ಸದಸ್ಯರುಗಳಾದ ವಿಮಲಾಕ್ಷಿ ಗೋಳ್ಯಾಡಿ, ಲೀಲಾವತಿ ತಂಬಿನಡ್ಕ, ಸುನಂದ ಗಡಿಕಲ್ಲು, ವಿಪತ್ತು ನಿರ್ವಹಣಾ ತಂಡ ಸದಸ್ಯರು, ಚಂದ್ರಶೇಖರ ತಂಬಿನಡ್ಕ, ಪ್ರತಿಕ್, ಶಾಲಾ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Also Read  ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ವೇಶ್ಯಾವಾಟಿಕೆ ದಂಧೆ ➤ ಸುಳ್ಯದ ಯುವಕ ಸೇರಿದಂತೆ ನಾಲ್ವರ ಬಂಧನ

 

 

 

error: Content is protected !!
Scroll to Top