ನಟಿ ಮೇಲೆ ಅತ್ಯಾಚಾರ ಆರೋಪ ➤ ಮಾಜಿ ಸಚಿವನ ಅರೆಸ್ಟ್​

(ನ್ಯೂಸ್ ಕಡಬ) newskadaba,ಬೆಂಗಳೂರು ಜೂ. 20: ಅತ್ಯಾಚಾರ ಆರೋಪ ಹೊತ್ತಿರುವ ತಮಿಳುನಾಡಿನ ಎಐಡಿಎಂಕೆ ಪಕ್ಷದ ಮಾಜಿ ಸಚಿವ ಮಣಿಕಂದನ್​ ಅವರನ್ನು ಇಂದು ಬೆಂಗಳೂರಿನಲ್ಲಿ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.  ಅತ್ಯಾಚಾರ ಪ್ರಕರಣದ ಆರೋಪಿ ಮಣಿಕಂದನ್​ ತಲೆಮರೆಸಿಕೊಂಡಿದ್ದರು ಎನ್ನಲಾಗಿದ್ದು, ತಮಿಳುನಾಡು ಪೊಲೀಸರು ಹುಡುಕಾಟ ನಡೆಸಿದ್ದರು. ಇಂದು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಮಾಜಿ ಸಚಿವರನ್ನು ಬಂಧಿಸಿದ್ದಾರೆ.

ಆರೋಪಿ ಮಣಿಕಂದನ್​ ಮಲೇಷ್ಯಾ ಮೂಲದ ನಟಿ ಮೇಲೆ ಅತ್ಯಾಚಾರ ಎಸಗಿದ್ದರು ಎಂಬ ಆರೋಪ ಕೇಳಿ ಬಂದಿದೆ.  2017ರಲ್ಲಿ ಮಣಿಕಂದನ್ ಐಟಿ ಸಚಿವರಾಗಿದ್ದಾಗ ನಟಿಯ ಪರಿಚಯವಾಗಿತ್ತು.  ಮಲೇಷಿಯಾದಲ್ಲಿ ಹೂಡಿಕೆ ಮಾಡುವ ವಿಚಾರಕ್ಕೆ ನಟಿಯನ್ನು ಪರಿಚಯ ಮಾಡಿಕೊಂಡಿದ್ದರು. ಬಳಿಕ ಮಣಿಕಂದನ್​ ನಟಿಯನ್ನು  ಮದುವೆಯಾಗುವುದಾಗಿ ನಂಬಿಸಿ,  ಲಿವಿಂಗ್ ಇನ್ ರಿಲೇಶನ್ ಇದ್ದರು ಎಂದು ತಿಳಿದು ಬಂದಿದೆ.ಆಕೆಯ ಮೇಲೆ ಅತ್ಯಾಚಾರ ಎಸಗಿದ್ದರು. ಜೊತೆಗೆ ಮೂರು ಬಾರಿ ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ್ದರು ಎಂಬ ಆರೋಪವೂ ಸಹ ಕೇಳಿ ಬಂದಿದೆ.ಇಂದು ಮುಂಜಾನೆ ಮೂರು ಗಂಟೆಗೆ ಅತ್ಯಾಚಾರ ಪ್ರಕರಣದ ಆರೋಪಿ ಮಣಿಕಂದನ್​ನ್ನು ಪೊಲೀಸರು ಬಂಧಿಸಿದ್ದಾರೆ.

error: Content is protected !!

Join the Group

Join WhatsApp Group