ಭಾರತೀಯ ಹಜ್ ಯಾತ್ರಿಕರಿಗೆ ನಿರಾಸೆ ➤ ಈ ಬಾರಿ ಸೌದಿ ಅರೇಬಿಯಾ ನಿವಾಸಿಗಳಿಗೆ ಮಾತ್ರ ಅವಕಾಶ



(ನ್ಯೂಸ್ ಕಡಬ) Newskadaba.com ಸೌದಿ ಅರೇಬಿಯಾ, ಜೂ. 13. ಕೊರೋನಾ ವೈರಸ್ ಕಾರಣದಿಂದಾಗಿ ಈ ವರ್ಷ ಗರಿಷ್ಠ 60 ಸಾವಿರ ಮಂದಿಗೆ ಮಾತ್ರ ಧಾರ್ಮಿಕ ಯಾತ್ರೆಯನ್ನು ಸೀಮಿತಗೊಳಿಸಿರುವುದಾಗಿ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.





ಕೇವಲ ತನ್ನ ದೇಶದ ಜನರಿಗೆ ಮಾತ್ರ ಹಜ್ ಯಾತ್ರೆಗೆ ಅವಕಾಶ ನೀಡುವುದಾಗಿ ಸೌದಿ ಅರೇಬಿಯಾ ಸರ್ಕಾರ ಘೋಷಿಸಿದೆ. ಹಜ್ ಯಾತ್ರೆ ಮಾಡಲು ಉದ್ದೇಶಿಸುವ ದೇಶದೊಳಗಿನ ನಾಗರಿಕರು ಮಾತ್ರ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಈ ವರ್ಷ ಲಸಿಕೆ ಹಾಕಿಸಿಕೊಂಡ ಮತ್ತು ಕೊರೊನಾದಿಂದ ಚೇತರಿಸಿಕೊಂಡ ಮತ್ತು ದೀರ್ಘಕಾಲದ ಕಾಯಿಲೆಗಳನ್ನು ಹೊಂದಿರದ 18ರಿಂದ 65 ವರ್ಷದೊಳಗಿನ ವ್ಯಕ್ತಿಗಳಿಗೆ ಮಾತ್ರ ನೋಂದಣಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.






 

 

 

error: Content is protected !!
Scroll to Top