ಕಾರ್ಪೊರೇಟ್ ಕುಲಗಳ ತಾಳಕ್ಕೆ ತಕ್ಕ ಕುಣಿಯುವ ಸರಕಾರದಿಂದಾಗಿ ಉಡುಪಿ ಜಿಲ್ಲೆಗೆ ಒಲಿಯದ ಸರಕಾರಿ ವೈದ್ಯಕೀಯ ಕಾಲೇಜು…! ➤ ಜಿಲ್ಲಾ ಕಾರ್ಯದರ್ಶಿ, ಕ್ಯಾಂಪಸ್ ಫ್ರಂಟ್ ಉಡುಪಿ

(ನ್ಯೂಸ್ ಕಡಬ) Newskadaba.com ಉಡುಪಿ, ಜೂ. 13. ಹಲವು ವರ್ಷಗಳಿಂದ ಉಡುಪಿ ಜಿಲ್ಲೆಯ ಜನರ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಇನ್ನೂ ಕೂಡಾ ಸ್ಥಾಪನೆಗೊಂಡಿಲ್ಲ. ಜಿಲ್ಲೆಯ ಬಡ ವಿದ್ಯಾರ್ಥಿಗಳು ಇಲ್ಲಿಯ ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವುದು ಅಸಾಧ್ಯದ ಮಾತು. ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದ ಕಾರಣ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಸರ್ಕಾರವೇ ಆಗಿರುತ್ತದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಫೆಬ್ರವರಿ 26 ರಂದು ಜಿಲ್ಲಾಧಿಕಾರಿಯ ಮುಖಾಂತರ ಸರಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಈ ಮನವಿಗೆ ಸರ್ಕಾರ ಕಿಂಚಿತ್ತೂ ಕಾಳಜಿ ತೋರಿಸದಿರುವ ಕಾರಣ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ಈ ಹೋರಾಟದ ಮುಂದುವರಿದ ಭಾಗವಾಗಿ ಇಲ್ಲಿ ಇರುವಂತಹ ಪ್ರಗತಿಪರ ಚಿಂತಕರನ್ನು, ವಿದ್ಯಾರ್ಥಿ ಮತ್ತು ಸಾಮಾಜಿಕ ಸಂಘಟನೆಗಳನ್ನು ಒಟ್ಟು ಗೂಡಿಸಿ ಒಂದು ಆಂದೋಲನ ರೂಪಿಸಲು ಎಲ್ಲಾ ಸಿದ್ಧತೆ ನಡೆಸುತ್ತಿದೆ.

Also Read  ಮಂಗಳೂರು: ಜಲೀಲ್ ಕೊಲೆ ಪ್ರಕರಣ ➤ ಮೂವರ ಬಂಧನ

error: Content is protected !!
Scroll to Top