ನರಿಮೊಗರು: ಮಾನಸಿಕ ಅಸ್ವಸ್ಥೆಯಾಗಿದ್ದ ಯುವತಿ ನಾಪತ್ತೆ



(ನ್ಯೂಸ್ ಕಡಬ) newskadaba,ನರಿಮೊಗರು ಜೂ.05: ಮಾನಸಿಕ ಅಸ್ವಸ್ಥೆ ಯುವತಿಯೊಬ್ಬರು ನಾಪತ್ತೆಯಾದ ಘಟನೆ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಕರ್ಗಲ್ಲು ಎಂಬಲ್ಲಿ ವರದಿಯಾಗಿದೆ. 23 ವರ್ಷದ ವಿಜೇತಾ ಎಂಬುವವರು ನಾಪತ್ತೆಯಾಗಿರುವ ಯುವತಿ.







 

ವಿಜೇತ ಅವರು ಮಾನಸಿಕ ಅಸ್ವಸ್ಥರಾಗಿದ್ದು, ಜೂ.4ರಂದು ಬೆಳಿಗ್ಗೆ ತನ್ನ ಮನೆಯಿಂದ ಹೊರಗೆ ಹೋದವರು ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಯುವತಿ ತಂದೆ ಅಣ್ಣು ಪೂಜಾರಿ ಅವರು ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.






error: Content is protected !!
Scroll to Top