ಮಂಗಳೂರು: ನಿಲ್ಲಿಸಿದ್ದ ತ್ಯಾಜ್ಯ ವಿಲೇವಾರಿಯ ಲಾರಿ ಹಠಾತ್ ಚಲಿಸಿ ಬೈಕ್, ಕಾರು ಹಾಗೂ ಟೆಂಪೋಗೆ ಢಿಕ್ಕಿ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 22. ಇಲ್ಲಿನ ಕಂಕನಾಡಿ ಮಾರುಕಟ್ಟೆಯ ಬಳಿ ನಿಂತಿದ್ದ ಲಾರಿಯೊಂದು ಹಠಾತ್ತಾಗಿ ಚಲಿಸಿದ ಪರಿಣಾಮ ಕೋಳಿ ಅಂಗಡಿ ಹಾಗೂ ವಾಹನಗಳಿಗೆ ಹಾನಿಯಾದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.

ಆ್ಯಂಟನಿ ಕಂಪೆನಿಗೆ ಸೇರಿದ ತ್ಯಾಜ್ಯ ವಿಲೇವಾರಿ ಲಾರಿಯನ್ನು ಚಾಲಕ ನಿಲ್ಲಿಸಿ ಸ್ವಲ್ಪ ದೂರ ಹೋಗಿದ್ದು, ಈ ಸಂದರ್ಭ ಲಾರಿಯು ಏಕಾಏಕಿ ಚಲಿಸಿದ ಪರಿಣಾಮ ಮೂರು ಕಾರು, ಎರಡು ದ್ವಿಚಕ್ರ ವಾಹನ, ಒಂದು ಟೆಂಪೋಗೆ ಢಿಕ್ಕಿ ಹೊಡೆದಿದ್ದಲ್ಲದೇ ಸಮೀಪದಲ್ಲಿದ್ದ ಕೋಳಿ ಅಂಗಡಿಗೂ ಢಿಕ್ಕಿ ಹೊಡೆದಿದೆ‌. ಘಟನೆಯಿಂದ ಒಂದು ದ್ವಿಚಕ್ರ ವಾಹನ ಜಖಂಗೊಂಡಿದ್ದು, ಕೋಳಿ ಅಂಗಡಿಯ ಜನರೇಟರ್‌ಗೆ ಹಾನಿಯಾಗಿದೆ. ಘಟನೆಯ ಸಂದರ್ಭ ಅಲ್ಲೇ ಇದ್ದ ಲಾರಿ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Also Read  ಕಾಂಗ್ರೆಸ್ ಮೂರನೇ ಪಟ್ಟಿ ಬಿಡುಗಡೆ ➤ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಘೋಷಣೆ

error: Content is protected !!
Scroll to Top