ಹಳೆಯಂಗಡಿ: ಸಿಡಿಲು ಬಡಿದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಬಾಲಕ ಮೃತ್ಯು

(ನ್ಯೂಸ್ ಕಡಬ) newskadaba.com ಹಳೆಯಂಗಡಿ, ಎ. 22. ಇಲ್ಲಿನ ಬೊಳ್ಳೂರು ಇಂದಿರಾ ನಗರದಲ್ಲಿ ಆಟವಾಡುತ್ತಿದ್ದ ಪುಟ್ಟ ಮಕ್ಕಳಿಬ್ಬರು ಸಿಡಿಲು ಬಡಿದ ಪರಿಣಾಮ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮತ್ತೋರ್ವ ಬಾಲಕ ಮಾರುತೇಶ್ (6 ವ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಇಂದಿರಾ ನಗರದ ಬೊಳ್ಳೂರು ಮಸೀದಿ ಹಿಂಭಾಗದ ಖಾಸಗಿ ಜಮೀನಿನಲ್ಲಿ ಮನ್ಸೂರ್ ಎಂಬವರ ನಿಹಾನ್(6) ಹಾಗೂ ಗಂಗಾವತಿ ಮೂಲದ ದುರ್ಗಪ್ಪ ಎಂಬವರ ಮಗ ಮಾರುತೇಶ್(6) ಮಂಗಳವಾರ ಸಂಜೆ ಮನೆಯ ಹತ್ತಿರ ಆಟವಾಡುತ್ತಿದ್ದ ಸಂದರ್ಭ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲಿಯೇ ಮೂರ್ಛೆ ಹೋಗಿದ್ದರು. ನಂತರ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರ ಪೈಕಿ ನಿಹಾನ್ ಬುಧವಾರದಂದು ಮೃತಪಟ್ಟಿದ್ದು, ಮತ್ತೋರ್ವ ಬಾಲಕ ಗುರುವಾರ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

Also Read  ಮಧ್ಯರಾತ್ರಿಯಲ್ಲಿ ವಾಹನ ಚಲಾಯಿಸುವಾಗ ಭಯ ಹುಟ್ಟಿಸುತ್ತಾನೆ….ಈ ವ್ಯಕ್ತಿ!!!              

error: Content is protected !!
Scroll to Top