(ನ್ಯೂಸ್ ಕಡಬ) newskadaba.com ಮಂಗಳೂರು, ಎ. 13. ಸರ್ಕಾರದ ಆದೇಶದಂತೆ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎರಡು ದಿನದಿಂದ ನೈಟ್ ಕರ್ಫ್ಯೂ ಜಾರಿಯಲ್ಲಿದ್ದು, ಇದರ ಉಲ್ಲಂಘನೆ ಮಾಡಿದ ಕಾರಣಕ್ಕೆ ಶನಿವಾರ 65 ಹಾಗೂ ಭಾನುವಾರದಂದು 13 ವಾಹನ ಮಾಲಕರ ವಿರುದ್ದ ಕೇಸು ದಾಖಲಿಸಲಾಗಿದೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್, ನಗರದಲ್ಲಿ ಜನರು ಕರ್ಫ್ಯೂಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಆದರೆ ಹತ್ತು ಗಂಟೆಯ ವೇಳೆಗೆ ಅಂಗಡಿ ಹಾಗೂ ಹೊಟೇಲ್ಗಳನ್ನು ಬಂದ್ ಮಾಡಿದರೆ, ಹೊಟೇಲ್ ಮಾಲಕರು, ಅಂಗಡಿ ಮಾಲಕರು, ಸಿಬ್ಬಂದಿಗಳು ಮನೆಗೆ ತೆರಳುವಾಗ ಕರ್ಫ್ಯೂ ಜಾರಿಯಲ್ಲಿರುತ್ತದೆ. ಆದ್ದರಿಂದ 10 ಗಂಟೆಗೆ ಮೊದಲೇ ಮನೆಗೆ ತಲುಪುವಂತೆ ನೋಡಿಕೊಂಡು ಹೋಟೆಲ್, ಅಂಗಡಿಗಳನ್ನು ಮುಚ್ಚಬೇಕು ಎಂದರು. ಹಾಗೆಯೇ ನಗರ ಪಾಲಿಕೆ ವ್ಯಾಪ್ತಿಯಲ್ಲಿ 49 ಹಾಗೂ ಹೊರಗಡೆ 4 ಚೆಕ್ ಪೋಸ್ಟ್ಗಳನ್ನು ಹಾಕಲಾಗಿದೆ ಎಂದು ಹೇಳಿದರು.