ವಿಟ್ಲ: ಅಕ್ರಮ ಗೋ‌ಸಾಗಾಟ ತಡೆದ ಬಜರಂಗದಳ‌ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com ವಿಟ್ಲ, ಎ. 02. ಅಕ್ರಮವಾಗಿ ಗೋಸಾಗಾಟವನ್ನು ಬಜರಂಗದಳ ಕಾರ್ಯಕರ್ತರು ತಡೆದು ಪೊಲೀಸರಿಗೊಪ್ಪಿಸಿದ ಘಟನೆ ಕುಂಡಡ್ಕ ಎಂಬಲ್ಲಿ ನಡೆದಿದೆ.

ಹಸುವನ್ನು ಠಾಣೆಗೆ ಕರೆದೊಯ್ದ ಕ್ಷಣಾರ್ಧದಲ್ಲೇ ಹಸುವು ಹೆಣ್ಣು ಕರುವೊಂದಕ್ಕೆ ಜನ್ಮ ನೀಡಿದೆ. ಕುಂಡಡ್ಕ ಅಬೀರಿ ಶಾಖೆಯ ವಿಹಿಂಪ ಬಜರಂಗದಳ ಕಾರ್ಯಕರ್ತರ ಸಮಯ ಪ್ರಜ್ಞೆಯಿಂದ ಹಸು ಹಾಗು ಕರುವಿನ ರಕ್ಷಣೆ ಮಾಡಲಾಯಿತು.

Scroll to Top