(ನ್ಯೂಸ್ ಕಡಬ) newskadaba.com ಕಡಬ, ಮಾ. 25. ಐತ್ತೂರು ಗ್ರಾಮದ ಮೂಜೂರು ನಿವಾಸಿ ಪ್ರಸಾದ್ ಎಂಬವರ ಮನೆಗೆ ಮಾ.3ರಂದು ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಅರಣ್ಯಾಧಿಕಾರಿಗಳು ಹಾಗೂ ಇತರರು ದಾಳಿಯ ನೆಪದಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಕಡಬ ಠಾಣೆಯಲ್ಲಿ 9 ಮಂದಿ ಹಾಗೂ ಇತರ 12 ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಮಂಗಳೂರು ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಸಂಧ್ಯಾ, ಸುಬ್ರಹ್ಮಣ್ಯ ವಲಯಾಣ್ಯಾಧಿಕಾರಿ ರಾಘವೇಂದ್ರ, ಫಾರೆಸ್ಟರ್ ಸಂತೋಷ್, ಪ್ರಕಾಶ್, ಬೀಟ್ ಫಾರೆಸ್ಟರ್ ರವಿಚಂದ್ರ, ಬೀಟ್ ಗಾರ್ಡ್ ಅಶೋಕ್, ಐತ್ತೂರು ಬೀಟ್ ಗಾರ್ಡ್ ಪ್ರಕಾಶ್, ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವಪ್ರಸಾದ್, ಐತ್ತೂರು ಶಿವಾಜಿನಗರದ ನಿವಾಸಿ ಅಬ್ಬಾಸ್ ಹಾಗೂ ಇತರ ಹನ್ನೆರಡು ಮಂದಿಯ ವಿರುದ್ದ ಐ.ಪಿ.ಸಿ ಕಲಂ 448, 383, 384, 395, 323, 504, 506, 34 ರ ಅನ್ವಯ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.