ಕಡಬ: ನಾಳೆ (ಫೆ. 24) ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಸಮ್ಯಕ್ತ್ ಜೈನ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 23.‌ ತಾಲೂಕಿನ ಎರಡನೇ ಸಾಹಿತ್ಯ ಸಮ್ಮೇಳನವು ಫೆ.24 ರಂದು ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಲಿದ್ದು, ಈ ಸಮ್ಮೇಳನದ ಕವಿಗೋಷ್ಠಿಗಾಗಿ ನೂಜಿಬಾಳ್ತಿಲದ ಯುವ ಸಾಹಿತಿ ಸಮ್ಯಕ್ತ್ ಜೈನ್ ರವರು ಆಯ್ಕೆಯಾಗಿದ್ದಾರೆ.

ಸಾಫಿಯೆನ್ಶಿಯಾ ಬೆಥನಿ ಕಾಲೇಜು ನೆಲ್ಯಾಡಿಯಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾಭ್ಯಾಸವನ್ನು ಪಡೆಯುತ್ತಿರುವ ಇವರು ಹೊಸಂಗಡಿ ಬಸದಿ ಧರಣೇಂದ್ರ ಇಂದ್ರ ಹಾಗು ಮಂಜುಳಾ ದಂಪತಿಯ ಸುಪುತ್ರ. ಎಳೆ ವಯಸ್ಸಿನಲ್ಲಿಯೇ ಮೂರು ಸಾಹಿತ್ಯ ಕೃತಿ ಬರೆದು ಬಿಡುಗಡೆಗೊಳಿಸಿ ಸಾಹಿತ್ಯ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ.

Also Read  ಬೋಟನ್ನು ವಶಕ್ಕೆ ಪಡೆದ ಪೊಲೀಸರ ಅಪಹರಣ ➤ ಸಿನಿಮಾ ಶೈಲಿಯಲ್ಲಿ ಎಸ್ಕೇಪ್ ಆದ ಮಂಗಳೂರಿನ ಮೀನುಗಾರರು

error: Content is protected !!
Scroll to Top