ಉಳ್ಳಾಲ: ಆಳಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ದೋಣಿಗೆ ಬೃಹತ್ ಗಾತ್ರದ ಮಡಲ್ ಮೀನು ಢಿಕ್ಕಿ ➤ ಬೋಟ್ ಗೆ ಹಾನಿ

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 13. ಆಳಸಮುದ್ರದ ಮೀನುಗಾರಿಕೆ ನಡೆಸುತ್ತಿದ್ದ ಬೋಟ್ ಗೆ ಮಡಲ್ ಮೀನೊಂದು ಡಿಕ್ಕಿ ಹೊಡೆದ ಪರಿಣಾಮ ಬೋಟ್ ಹಾನಿಗೀಡಾಗಿರುವ ಘಟನೆ ನಡೆದಿದೆ.

ಚೂಪು ಬಾಯಿ ಹೊಂದಿರುವ ಹಾಗೂ ದೊಡ್ಡ ಗಾತ್ರದ ತುಳುವಿನಲ್ಲಿ ‘ಮಡಲ್ ಮೀನ್’ ಎಂದು ಕರೆಯಲಾಗುವ ಮೀನೊಂದು ಆಳಸಮುದ್ರ ಮೀನುಗಾರಿಕೆ ನಡೆಸುತ್ತಿದ್ದ ಬೋಟ್‌ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಮೀನಿನ ಬಾಯಿ ಮುರಿದು ಮೀನಿನಲ್ಲಿ ರಕ್ತಸ್ರಾವ ಉಂಟಾಗಿದಲ್ಲದೇ ಮೀನು ಗುದ್ದಿದ ರಭಸಕ್ಕೆ ಮೀನುಗಾರಿಕಾ ಬೋಟ್ ಗೆ ಹಾನಿಯಾಗಿದೆ.

Scroll to Top