? ಎಟಿಎಂಗೆ ತುಂಬಿಸಬೇಕಿದ್ದ 64 ಲಕ್ಷ ರೂ ಕದ್ದು ಪರಾರಿಯಾಗಿದ್ದ ಚಾಲಕ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ. 11. ಎಟಿಎಂಗೆ ಹಣ ತುಂಬಿಸಬೇಕಿದ್ದ 64 ಲಕ್ಷ ರೂ. ಹಣವನ್ನು ಕದ್ದೊಯ್ದು ಪ್ರೇಯಸಿಯ ಜೊತೆ ಪರಾರಿಯಾಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಬೆಂಗಳೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಯೋಗೇಶ್ ಎಂದು ಗುರುತಿಸಲಾಗಿದೆ. ಈತ ಫೆ. 03. ರಂದು ಎಟಿಎಂಗೆ ಹಣ ತುಂಬಿಸಲಿಕೋಸ್ಕರ ಸೆಕ್ಯೂರಿಟಿಗಳು ಎಟಿಎಂಗೆಂದು ತೆರಳಿದ್ದ ವೇಳೆ ಹಣದ ಬ್ಯಾಗನ್ನು ತೆಗೆದುಕೊಂಡು ಪರಾರಿಯಾಗಿದ್ದ. ಈತನ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಸೆಕ್ಯೂರ್ ವ್ಯಾಲ್ಯೂ ಏಜೆನ್ಸಿಯಲ್ಲಿ ಡ್ರೈವರ್ ಆಗಿದ್ದ ಆರೋಪಿ ಯೋಗೇಶ್, ಹಣ ಕದ್ದು ಗೆಳೆಯನ ಮನೆಯಲ್ಲಿ ಪ್ರಿಯತಮೆಯ ಜೊತೆ ಆಶ್ರಯ ಪಡೆದಿದ್ದ ಎನ್ನಲಾಗಿದೆ.

Also Read  ಶರಣ್ ಪಂಪ್ ವೆಲ್ ವಿರುದ್ದ ಸುಳ್ಳು ಸುದ್ದಿ- ಕಠಿಣ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಹೋರಾಟ ➤ ಹಿಂದೂ ಸಂಘಟನೆಗಳ ಎಚ್ಚರಿಕೆ..❗

error: Content is protected !!
Scroll to Top