? ಮೀನುಗಾರಿಕೆಗೆ ತೆರಳಿದ್ದ ವೇಳೆ ಮೀನಿನ ಬಲೆಗೆ ಸಿಲುಕಿ ವ್ಯಕ್ತಿ ಮೃತ್ಯು



(ನ್ಯೂಸ್ ಕಡಬ) newskadaba.com ಕಾಪು, ಫೆ. 08. ಮೀನುಗಾರಿಕೆಗೆಂದು ತೆರಳಿದ್ದ ವೇಳೆ ಮೀನುಗಾರನೋರ್ವ ಬಲೆಗೆ ಸಿಲುಕಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಕಾಪು ಲೈಟ್ ಹೌಸ್ ಬಳಿ ನಡೆದಿದೆ.






ಮೃತಪಟ್ಟವರನ್ನು ಕಾಪು ಗರಡಿ ನಿವಾಸಿ ಕಾಸ್ಮರ್ (65) ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸಾಂಪ್ರದಾಯಿಕ ಮೀನುಗಾರಿಕೆಗೆಂದು ತೆರಳಿದ್ದ ಇವರು ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆ ಬಲೆಯೊಳಗೆ‌ ಸಿಲುಕಿ, ಸಮುದ್ರಕ್ಕೆ ಬಿದ್ದು ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಕಾಸ್ಮಾರ್ ನೀರಿನಲ್ಲಿ‌ ಮುಳುಗುತ್ತಿರುವುದನ್ನು ಕಂಡ ಸ್ಥಳೀಯ ಮೀನುಗಾರರು ತಕ್ಷಣ ಅವರ ನೆರವಿಗೆ ಧಾವಿಸಿದ್ದರು.‌ ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಮೇಲಕ್ಕೆತ್ತಲಾಗಿದ್ದು, ಕಾಪು‌ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ.






error: Content is protected !!
Scroll to Top