ಪುತ್ತೂರು: ಜುಪಿಟರ್ – ಪಿಕಪ್ ನಡುವೆ ಅಪಘಾತ | ಸವಾರ ಮೃತ್ಯು ➤ ಕಳೆದ 36 ಗಂಟೆಗಳಲ್ಲಿ ನಾಲ್ವರು ದ್ವಿಚಕ್ರ ವಾಹನ ಸವಾರರ ದುರ್ಮರಣ



(ನ್ಯೂಸ್ ಕಡಬ) newskadaba.com ಪುತ್ತೂರು, ಫೆ.08. ಮಹೀಂದ್ರಾ ಪಿಕಪ್ ಹಾಗೂ ಟಿವಿಎಸ್ ಜುಪಿಟರ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಮೊಟ್ಟೆತ್ತಡ್ಕ ಎಂಬಲ್ಲಿ ಸೋಮವಾರದಂದು ನಡೆದಿದೆ.





ಮೃತ ಸವಾರನನ್ನು ಸಾಮೆತ್ತಡ್ಕ ನಿವಾಸಿ ಪ್ರಸಾದ್ ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ ಜುಪಿಟರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಪಿಕಪ್ ಚರಂಡಿಗೆ ಇಳಿದಿತ್ತು. ಕರಾವಳಿಯಲ್ಲಿ ಕಳೆದ 36 ಗಂಟೆಗಳ ಅವಧಿಯಲ್ಲಿ ನಡೆದ 4 ದ್ವಿಚಕ್ರ ವಾಹನ ಅಪಘಾತದಲ್ಲಿ ನಾಲ್ವರು ಸವಾರರೂ ಬಲಿಯಾಗಿದ್ದು, ಬೆಚ್ಚಿಬೀಳಿಸುವಂತೆ ಮಾಡಿದೆ.






 

error: Content is protected !!
Scroll to Top