ನೂಜಿಬಾಳ್ತಿಲ: ಯುವಸಾಹಿತಿ ಸಮ್ಯಕ್ತ್ ಜೈನ್ ಹಾಗೂ ದಿನೇಶ್ ರೈ ಅವರಿಗೆ ಕನ್ವರೆ ಸಾರಿಮಂಟಮೆಯಲ್ಲಿ ಸನ್ಮಾನ

(ನ್ಯೂಸ್ ಕಡಬ) newskadaba.com ನೂಜಿಬಾಳ್ತಿಲ, ಫೆ. 06. ನೂಜಿಬಾಳ್ತಿಲ ಗ್ರಾಮದ ಕನ್ವರೆ ಸಾರಿಮಂಟಮೆಯಲ್ಲಿ ಶ್ರೀರಾಜನ್ ದೈವದ ವಾರ್ಷಿಕ ನೇಮೋತ್ಸವವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಒಳಗೊಂಡಂತೆ ಅದ್ದೂರಿಯಿಂದ ಭಕ್ತರ ಸಮ್ಮುಖದಲ್ಲಿ ನೆರವೇರಿತು.

ಈ ವೇಳೆ ಉದಯೋನ್ಮುಖ ಯುವ ಸಾಹಿತಿ ಸಮ್ಯಕ್ತ್ ಜೈನ್ ರವರನ್ನು ಹಾಗೂ ಯಕ್ಷಕಲಾವಿದ ದಿನೇಶ್ ರೈ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

Scroll to Top