ಲಂಚ ಸ್ವೀಕರಿಸುತ್ತಿದ್ದ ತಾಲೂಕು ಕಛೇರಿ ಗುಮಾಸ್ತ ಎಸಿಬಿ ವಶಕ್ಕೆ..!

(ನ್ಯೂಸ್ ಕಡಬ) newskadaba.com ಮೈಸೂರು, ಫೆ. 06. ಲಂಚ ಸ್ವೀಕರಿಸುತ್ತಿದ್ದ ಶ್ರೀರಂಗಪಟ್ಟಣ ತಾಲೂಕು ಕಛೇರಿಯ ಆರ್.ಆರ್ ಶಾಖೆ ಗುಮಾಸ್ತ ಪಿ.ಮಂಜು ಎಂಬವರನ್ನು ಎಸಿಬಿ ವಶಕ್ಕೆ ಪಡೆಯಲಾಗಿದೆ.

ಇವರು ತಾಲೂಕಿನ ಚಂದಗಿರಿಕೊಪ್ಪದಲ್ಲಿ ಗ್ರಾಮದ ಧರಣೇಂದ್ರ ಕುಮಾರ್ ಎಂಬವರಿಂದ ಲಂಚ ಪಡೆಯುತ್ತಿದ್ದ ಸಂದರ್ಭ ದಾಳಿ ನಡೆಸಿದ ಎಸಿಬಿ ಡಿವೈಎಸ್ಪಿ ಧರ್ಮೇಂದ್ರ, ಸಿಪಿಐ ಸತೀಶ್ ಹಾಗೂ ರವಿಶಂಕರ್ ಹಣದ ಸಹಿತ ಆರೋಪಿಯನ್ನು ವಶಪಡಿಸಿದ್ದಾರೆ.

Scroll to Top