ಕುಮಾರಾಧಾರ ನದಿಯಲ್ಲಿ ಮೀನು ಹಿಡಿಯಲೆಂದು ತೆರಳಿದ್ದ ವ್ಯಕ್ತಿ ನಾಪತ್ತೆ

(ನ್ಯೂಸ್ ಕಡಬ) newskadaba.com ಪುತ್ತೂರು, ಫೆ. 02. ಶಾಂತಿಗೋಡು ಸಮೀಪದ ಕುಮಾರಧಾರ ನದಿಗೆ ಮೀನು ಹಿಡಿಯಲೆಂದು ತೆರಳಿದ್ದ ಮೂವರ ಪೈಕಿ ಓರ್ವ ನಾಪತ್ತೆಯಾದ ಘಟನೆ ಇಂದದು ನಡೆದಿದೆ.

 

ನಾಪತ್ತೆಯಾದವರನ್ನು ಮುಂಡೂರು ನಿವಾಸಿ ಕಾಂತಪ್ಪ ಎಂದು ಗುರುತಿಸಲಾಗಿದೆ. ಇವರು ಶಾಂತಿಗೋಡು ಕುಮಾರಧಾರ ನದಿಗೆ ಮೀನು ಹಿಡಿಯಲೆಂದು ತನ್ನ ಮಗ ಹಾಗೂ ಸಂಬಂಧಿಕರೊಂದಿಗೆ ತೆರಳಿದ್ದ ಸಂದರ್ಭ ಇವರು ನಾಪತ್ತೆಯಾಗಿದ್ದಾರೆ ಎಂದು ಅವರ ಮಗ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಹುಡುಕಾಟ ನಡೆಸುತ್ತಿದ್ದಾರೆ.

Scroll to Top