ಸುರತ್ಕಲ್: ಯುವಕನಿಗೆ ಚೂರಿ ಇರಿತ ಪ್ರಕರಣ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 28. ಸುರತ್ಕಲ್ ಬಳಿಯ ಕಾಟಿಪಳ್ಳದ ಗಣೇಶಪುರ ಎಂಬಲ್ಲಿ ನಡೆದ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳನ್ನು ಶ್ರೀನಿವಾಸ(20), ರಾಜು (20) ಹಾಗೂ ಅಭಿಷೇಕ್ (19) ಎಂಸು ಗುರುತಿಸಲಾಗಿದೆ. ಈ ಆರೋಪಿಗಳ ಮೇಲೆ ಈಗಾಗಲೇ ಎರಡು ಕೇಸು ದಾಖಲಾಗಿದ್ದವು. ಇವರು ಬುಧವಾರದಂದು ರಾತ್ರಿ 10.45 ರ ಸುಮಾರಿಗೆ ಕಾಟಿಪಳ್ಳದ ಏಳನೇ ಬ್ಲಾಕ್ ನಿವಾಸಿ ಜಾಬಿರ್ ಎಂಬಾತನಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ್ದರು. ಆರೋಪಿಗಳ ಜೊತೆಗೆ ಕೃತ್ಯಕ್ಕೆ ಬಳಸಿದ ವಾಹನ ಮತ್ತು ಆಯುಧವನ್ನು ವಶಕ್ಕೆ ಪಡೆಯಲಾಗಿದೆ.

Scroll to Top