ಪಂಜ: ಹುಚ್ಚುನಾಯಿ ರೋಗನಿರೋಧಕ ಲಸಿಕಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಪಂಜ, ಜ. 25. ಜೇಸಿಐ ಪಂಜ ಪಂಚಶ್ರೀ ಹಾಗೂ ಪಶುಸಂಗೋಪನೆ ಇಲಾಖೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಹುಚ್ಚುನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮವು ಭಾನುವಾರದಂದು ಪಂಜ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು.

ಪ್ರಾಣಿಗಳಿಂದ ಗಾಳಿಯ ಮೂಲಕ ಅನೇಕ ಕಾಯಿಲೆಗಳು ಹರಡುತ್ತಿದ್ದು, ಈ ಬಗ್ಗೆ ಕಾಳಜಿ ವಹಿಸಿ ಮುಂಚಿತವಾಗಿ ಲಸಿಕೆ ನೀಡಬೇಕಾದುದು ಅತ್ಯಗತ್ಯವಾಗಿದೆ. ಇದರಿಂದ ಪಂಜ, ಬಳ್ಪ, ಕಲ್ಮಡ್ಕ, ಎಡಮಂಗಲ, ಎಣ್ಮೂರು ಹಾಗೂ ಗುತ್ತಿಗಾರು ಗ್ರಾ.ಪಂ ವ್ಯಾಪ್ತಿಯ ನಿಗದಿಯಾದ ಸ್ಥಳಗಳಲ್ಲಿ ಲಸಿಕೆ ನೀಡಲಾಯಿತು. ಈ ಸಂದರ್ಭ ಪಂಜ ಗ್ರಾ.ಪಂ. ಪಿಡಿಒ ಪುರುಷೋತ್ತಮ ಮನಿಯಾಣ, ಸುಳ್ಯ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

Also Read  ಮಂಡ್ಯದ ಡ್ರೋನ್ ಹುಡುಗನ ಹೊಸ ಕಥೆ ➤ ಆರೋಪ ನಿರಾಕರಿಸಿ ಸತ್ಯ ಶೀಘ್ರ ಬಹಿರಂಗಪಡಿಸುವೆ ಎಂದ ಪ್ರತಾಪ್

error: Content is protected !!
Scroll to Top