ಕಡಬ: ಬೆಳಗಿನ ಜಾವ ವಿದ್ಯಾರ್ಥಿಗಳ ಮನೆ-ಮನೆ ಭೇಟಿ ಮಾಡಿದ ಶಿಕ್ಷಣಾಧಿಕಾರಿ

(ನ್ಯೂಸ್ ಕಡಬ) newskadaba.com ಕಡಬ, ಜ. 22. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು ಉತ್ತಮ ಪಡಿಸುವ ಉದ್ದೇಶದಿಂದ ಶಿಕ್ಷಣಾಧಿಕಾರಿ ಲೋಕೇಶ್ ಅವರು ಹಮ್ಮಿಕೊಂಡ ವಿದ್ಯಾರ್ಥಿಗಳ ಮನೆ ಮನೆ ಭೇಟಿ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ತಾಲೂಕಿನ ಬಿಳಿನೆಲೆ, ಪದವು ಹಾಗೂ ಕಡಬ ಸೇರಿದಂತೆ ವಿವಿಧ ಭಾಗದ ವಿದ್ಯಾರ್ಥಿಗಳ ಮನೆಗೆ ಸ್ಥಳೀಯ ಶಿಕ್ಷಕರ ಜೊತೆ ನಸುಕಿನ ವೇಳೆಯೇ ಮನೆ ಮನೆ ಭೇಟಿ ನೀಡಿ ವಿದ್ಯಾರ್ಥಿಗಳ ಕಲಿಕಾ ಚಟುವಟಿಕೆಯನ್ನು ಗಮನಿಸಿ, ಮುಂಜಾನೆ ಐದು ಗಂಟೆಗೆ ಎಬ್ಬಿಸಿ ಓದುವುದರಲ್ಲಿ ಮಗ್ನರಾಗುವಂತೆ ಮಾಡುವ ಕಾರ್ಯದ ಸಮರ್ಪಕ ಅನುಷ್ಟಾನದ ಕುರಿತು ಪರಿಶೀಲನೆ ನಡೆಸಿದರು.

Scroll to Top