ಪುತ್ತೂರು: ಎಪಿಎಂಸಿ ಬಳಿ ಅಕ್ರಮ ಮದ್ಯ ಸಾಗಾಟ ಪತ್ತೆ ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 21. ಬೈಕ್ ವೊಂದರಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ಸಂದರ್ಭ ಗಸ್ತು ನಿರತ ಅಬಕಾರಿ ಅಧಿಕಾರಿಗಳು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಪೆರ್ನೆ ಕಾರ್ಲ ನಿವಾಸಿ ಪಿಯಾದ್ ಪಿಂಟೋ ಎಂದು ಗುರುತಿಸಲಾಗಿದೆ. ರಾತ್ರಿ ಕರ್ತವ್ಯ ನಿರತರಾಗಿದ್ದ ಅಬಕಾರಿ ಪೊಲೀಸರು ಎಪಿಎಂಸಿ ರೈಲ್ವೇ ಗೇಟ್ ಬಳಿ ತಪಾಸಣೆ ನಡೆಸಿದಾಗ ಬೈಕ್ ನ ಚೀಲವೊಂದರಲ್ಲಿ 280 ಎಂ.ಎಲ್ ನ48 ಬಾಟಲಿಯಲ್ಲಿ 8.640 ಲೀಟರ್ ಪ್ರೆಸ್ಟೇಜ್ ವಿಸ್ಕಿಯನ್ನು ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕೃತ್ಯಕ್ಕೆ ಬಳಸಿದ ಬೈಕ್ ನ್ನೂ ವಶಪಡಿಸಲಾಗಿದೆ. ಈ ಕುರಿತು ಪುತ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Scroll to Top