ಕೆಸಿಸಿ ಟ್ರಸ್ಟ್‌ನ ಪ್ರಥಮ ಪ್ರಾಂಚೈಸಿ ಮೀಟ್

ಮಂಗಳೂರು, ಜ.17. ಕೆಸಿಸಿ ಟ್ರಸ್ಟ್‌ನ ಪ್ರಥಮ ಪ್ರಾಂಚೈಸಿ ಮೀಟ್ ನಗರದ ಗೋಲ್ಡ್ ಫಿಂಚ್ ಹೊಟೇಲ್‌ನಲ್ಲಿ ರವಿವಾರ ನಡೆಯಿತು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕೆಸಿಸಿ ನಿರ್ದೇಶಕ ಹಾಗೂ ಯೆನೆಪೊಯ ವಿವಿಯ ಪ್ರಾಧ್ಯಪಕ ಅನ್ವರ್ ಅಮ್ಮೆಮಾರ್ ಟ್ರಸ್ಟ್‌ನ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರಲ್ಲದೆ ನೂತನ ಪ್ರಾಂಚೈಸಿಗಳಿಗೆ ಟ್ರಸ್ಟ್ ಬಗ್ಗೆ ಪರಿಚಯಿಸಿದರು.

ಕೆಸಿಸಿ ಮುಖ್ಯಕಾರ್ಯಾನಿರ್ವಾಹಣಾಧಿಕಾರಿ ರಹ್ಮಾನ್ ಕಾಯಾರ್ ಮಾತನಾಡಿ ರಾಜ್ಯದ ಪ್ರತಿಯೊಂದು ತಾಲೂಕಿನಲ್ಲೂ ಕೂಡ ಕೆಸಿಸಿ ಪ್ರಾಂಚೈಸಿಗಳನ್ನು ತೆರೆದು ಸರ್ವರಿಗೂ ನೆರವು ನೀಡುವ ಉದ್ದೇಶ ಹೊಂದಿದೆ. ಈಗಾಗಲೇ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಇದು ಯಶಸ್ಸಿಯಾಗಿದ್ದು, ಇತರ ಜಿಲ್ಲೆಗಳ ಪ್ರಾಂಚೈಸಿಗಳಿಂದ ಅರ್ಜಿಯನ್ನು ನಿರೀಕ್ಷಿಸುತ್ತಿದ್ದೇವೆ. ಇದರ ಯಶಸ್ಸಿಗೆ ಸರ್ವರೂ ಸಹಕರಿಸಬೇಕು ಎಂದು ಕರೆ ನೀಡಿದರು.
ಸಭೆಯಲ್ಲಿ ರಝಾಕ್ ಯೆನೆಪೊಯ ಹಾಗೂ ಯು.ಎಂ.ಇಬ್ರಾಹೀಂ ಕಾಸರಗೋಡು ಉಪಸ್ಥಿತರಿದ್ದರು.

Scroll to Top