ರೆಂಜಿಲಾಡಿ ಶಾಲೆಯಲ್ಲಿ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ಶ್ರಮದಾನ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜ. 18. ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ನೂಜಿ-ರೆಂಜಿಲಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂಜಿಬೈಲ್ ತುಳುನಾಡ ತುಡರ್ ಯುವಕ ಮಂಡಲದ ವತಿಯಿಂದ ಜ.17ರಂದು ಶ್ರಮದಾನ ನಡೆಯಿತು.

ನೂಜಿ ರೆಂಜಿಲಾಡಿ ಶಾಲೆಯಲ್ಲಿ ಸುವರ್ಣ ಮಹೋತ್ಸವ ನಡೆಯಲಿದ್ದು, ಪೂರ್ವಭಾವಿಯಾಗಿ  ಅಭಿವೃದ್ಧಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿದೆ. ಯುವಕ ಮಂಡಲದ ಸದಸ್ಯರು ಶಾಲೆಯ ಗೋಡೆಗೆ ಬಣ್ಣ ಬಳಿಯುವುದು, ವಠಾರ ಸ್ವಚ್ಚತೆ, ಹುಲ್ಲು ತೆರವು ಸೇರಿದಂತೆ ಇತರೆ ಕೆಲಸ ಕಾರ್ಯಗಳನ್ನು ನಡೆಸಿದರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಮೃತ್ಯುಂಜಯ ಬೀಡೆ ಕೆರೆತೋಟ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಪ್ರಸಾದ್ ಕರಿಂಬಿಲ, ತುಳುನಾಡ ತುಡರ್ ಸಂಚಾಲಕ ಯಶೋಧರ ಜಾಲು, ಅಧ್ಯಕ್ಷ ತಿರುಮಲೇಶ್ವರ ಸಾಕೋಟೆ, ಉಪಾಧ್ಯಕ್ಷ ಪ್ರದೀಶ್ ಪಟ್ಟೆ, ಕಾರ್ಯದರ್ಶಿ ದಯಾನಂದ ಕಲ್ನಾರ್, ಜತೆ ಕಾರ್ಯದರ್ಶಿ ಉಮೇಶ್ ಕಲ್ನಾರ್, ಕೋಶಾಧಿಕಾರಿ ಮಿಥುನ್ ಕಲ್ನಾರ್, ಸೇರಿದಂತೆ ಪದಾಧಿಕಾರಿಗಳು, ಸದಸ್ಯರು, ಪ್ರಮುಖರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

Scroll to Top