(ನ್ಯೂಸ್ ಕಡಬ) newskadaba.com ಸುಳ್ಯ, ಜ. 14. ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ದ.ಕ. ಜಿಲ್ಲೆಗೆ ಹಾಗೂ ತನ್ನ ಕ್ಷೇತ್ರವಾದ ಸುಳ್ಯಕ್ಕೆ ಪ್ರಥಮ ಬಾರಿಗೆ ನಾಳೆ (ಜ. 15)ರಂದು ಆಗಮಿಸಲಿದ್ದಾರೆ.
ನಾಳೆಯ ದಿನಚರಿ ಹೀಗಿದೆ:- ಬೆಳಗ್ಗೆ 11.30ಕ್ಕೆ ಮಂಗಳೂರು ವಿಮಾನ ನಿಲ್ದಾಣ, ಮಧ್ಯಾಹ್ನ 12.00ಕ್ಕೆ ಮಂಗಳೂರು ಕದ್ರಿ ಶ್ರೀ ಮಂಜುನಾಥ ದೇವರ ದರ್ಶನ, ಮಧ್ಯಾಹ್ನ 12.15 ಕ್ಕೆ ಮಂಗಳೂರು ಸಂಘದ ಕಾರ್ಯಾಲಯ ಸಂಘನಿಕೇತನಕ್ಕೆ ಭೇಟಿ, ಮಧ್ಯಾಹ್ನ 12.30 ಕ್ಕೆ ಮಂಗಳೂರು ಜಿಲ್ಲಾ ಬಿಜೆಪಿ ಕಛೇರಿಗೆ ಭೇಟಿಹಾಗೂ ಮಧ್ಯಾಹ್ನ 2.30ಕ್ಕೆ ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ, ಮಧ್ಯಾಹ್ನ 3.00 ಗಂಟೆಗೆ ಪುತ್ತೂರು ಮಹಾಲಿಂಗೇಶ್ವರ ದೇವರ ದರ್ಶನ, ಸಂಜೆ 4.00ಕ್ಕೆ ಜಾಲ್ಸೂರಿನಿಂದ ಸುಳ್ಯ ಕ್ಷೇತ್ರದ ಪರವಾಗಿ ವಾಹನ ಜಾಥಾದ ಮೂಲಕ ಅದ್ದೂರಿಯ ಸ್ವಾಗತ, ಸಂಜೆ 4.15ಕ್ಕೆ ಸುಳ್ಯ ಜ್ಯೋತಿ ಸರ್ಕಲ್ ನಿಂದ ಸಚಿವ ಅಂಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆ, ಸಂಜೆ 4.30ಕ್ಕೆ ಸುಳ್ಯ ಶ್ರೀ ಚೆನ್ನಕೇಶವ ದೇವರ ದರ್ಶನ ನಂತರ ಐದು ಗಂಟೆಗೆ ಸುಳ್ಯ ಬಿಜೆಪಿ ಕಛೇರಿಗೆ ಭೇಟಿ ನೀಡಲಿದ್ದಾರೆ ಎಂದು ಸುಳ್ಯ ಮಂಡಲ ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.