ಎಫ್.ಐ.ಆರ್ ದಾಖಲಿಸಲು ಒಂದು ಲಕ್ಷ ರೂ. ಬೇಡಿಕೆ ➤ ಎಸ್.ಐ ಹಾಗೂ ಹೆಡ್ ಕಾನ್ಸ್‌ಟೇಬಲ್ ಎಸಿಬಿ ಬಲೆಗೆ..!

(ನ್ಯೂಸ್ ಕಡಬ) newskadaba.com ಬೆಂಗಳೂರು,ಜ. 13. ಎಫ್.ಐ. ಆರ್ ದಾಖಲಿಸಲು 1 ಲಕ್ಷ ರೂ. ಲಂಚದ ಬೇಡಿಕೆಯಿಟ್ಟಿದ್ದ ಬೈಯ್ಯಪ್ಪನಹಳ್ಳಿ ಠಾಣೆ ಸಬ್ ಇನ್ಸ್ ಪೆಕ್ಟರ್ ಸೌಮ್ಯ ಹಾಗೂ ಹೆಡ್ ಕಾನ್ ಸ್ಟೇಬಲ್ ಜೆ.ಪಿ.ರೆಡ್ಡಿಯವರನ್ನು ಎಸಿಬಿ ಅಧಿಕಾರಿಗಳು  ಬಂಧಿಸಿದ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದ ದೂರುದಾರರಿಂದ ಎಫ್.ಐ.ಆರ್ ದಾಖಲಿಸಲು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ಎಸಿಬಿಗೆ ದೂರುದಾರರು ದೂರು ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಲಂಚದ ಹಣವನ್ನು ಪಡೆಯುತ್ತಿದ್ದಾಗ  ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ಎಸ್.ಐ ಸೌಮ್ಯ ಹಾಗೂ ಹೆಡ್ ಕಾನ್ ಸ್ಟೇಬಲ್ ಜೆ.ಪಿ.ರೆಡ್ಡಿಯವರನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಬ್ಬ ಕಾನ್ ಸ್ಟೇಬಲ್ ಸ್ಥಳದಿಂದ ಓಡುವ ಸಂದರ್ಭ ಜಾರಿ ಬಿದ್ದು ಕಾಲು ಮುರಿದುಕೊಂಡಿದ್ದಾರೆ.

error: Content is protected !!
Scroll to Top