ಸುಳ್ಯ: ಖಾಸಗಿ ಬಸ್ ಅಪಘಾತದಲ್ಲಿ ಐವರ ದುರ್ಮರಣ ➤ ಹಲವರು ಗಂಭೀರ

(ನ್ಯೂಸ್ ಕಡಬ) newskadaba.com ಸುಳ್ಯ, ಜ.03. ಸುಳ್ಯದಿಂದ ಪಾಣತ್ತೂರು ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸೊಂದು ಪಲ್ಟಿಯಾದ ಪರಿಣಾಮ ಐವರು ಮೃತಪಟ್ಟು, ಹಲವರು ಗಂಭೀರ ಗಾಯಗೊಂಡ ಘಟನೆ ಭಾನುವಾರದಂದು ಪಾಣತ್ತೂರು ಕಲ್ಲಪ್ಪಳ್ಳಿ ಬಳಿ ನಡೆದಿದೆ.

ಪುತ್ತೂರಿನ ಸುರಕ್ಷಾ ಸಂಸ್ಥೆಯ ಖಾಸಗಿ ಬಸ್ ಮದುವೆ ಸಮಾರಂಭಕ್ಕೆಂದು ಜನರನ್ನು ಕರೆದೊಯ್ಯುತ್ತಿದ್ದ ವೇಳೆ ಪಾಣತ್ತೂರು ಕಲ್ಲಪ್ಪಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ. ಕೆಲವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

error: Content is protected !!

Join the Group

Join WhatsApp Group