ಮಂಗಳೂರು : ಮದುವೆ ಮನೆಯಲ್ಲಿ ದಾಂದಲೆ ➤ ರೌಡಿಶೀಟರ್ ಬಂಧನ



(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.08: ನಗರದ ಪಡೀಲ್‌ ಸಮೀಪ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಮನೆಯೊಂದರಲ್ಲಿ ರೌಡಿಶೀಟರೊಬ್ಬ ವಿನಾಕಾರಣ ದಾಂಧಲೆ ನಡೆಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.





 

ರೌಡಿಶೀಟರ್‌ ಗೌರೀಶ್‌ ಆರೋಪಿಯಾಗಿದ್ದು, ಆತನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಕೊಲೆ, ಕೊಲೆಯತ್ನ ಸೇರಿದಂತೆ ನಾನಾ ಪ್ರಕರಣಗಳಿವೆ.ಈ ಹಿಂದೆ ಪೊಲೀಸರಿಗೂ ಈತ ಹಲ್ಲೆಗೆ ಯತ್ನಿಸಿದ್ದ. ಈತ ಪಡೀಲ್‌ ಹೋಂಸ್ಟೇ ಬಳಿ ಮನೆಯೊಂದರಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ತೆರಳಿದ್ದ. ಈ ಸಂದರ್ಭ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ನೆಂಟರ ಜತೆ ರೌಡಿಶೀಟರ್‌  ಮೂವರಿಗೆ ಹಲ್ಲೆ ನಡೆಸಿದ್ದಾನೆ. ಘಟನೆಯಿಂದ ಮೂವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top