(ನ್ಯೂಸ್ ಕಡಬ) newskadaba.com ಜು. 02. ಕರ್ನಾಟಕ ಸರ್ಕಾರದ “ಕರ್ನಾಟಕ ಆಧುನಿಕ ಹಾಜರಾತಿ ನಿರ್ವಹಣಾ ವ್ಯವಸ್ಥೆ”ಯ ಅನ್ವಯ, ರಾಜ್ಯ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ‘ಕರ್ತವ್ಯ’ ಮೊಬೈಲ್ ಆಪ್ ಬಳಸಿ ಹಾಜರಾತಿ ದಾಖಲಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ಈ ನಿಯಮದ ಪ್ರಕಾರ, ಇಲಾಖೆಯ ಎಲ್ಲಾ ಸಿಬ್ಬಂದಿಗಳು ಪ್ರತಿದಿನ ಕಚೇರಿಗೆ ಬಂದು ಬೆಳಗ್ಗೆ 10 ಗಂಟೆಗೆ ಆ್ಯಪ್ ಮೂಲಕ ‘CHECK IN’ ಮತ್ತು ಕರ್ತವ್ಯ ಮುಗಿಸಿ ತೆರಳುವಾಗ ‘CHECK OUT’ ದಾಖಲಿಸುವುದು ಕಡ್ಡಾಯ.
ಸರ್ಕಾರದ ಈ ಮಹತ್ವಾಕಾಂಕ್ಷಿ ಡಿಜಿಟಲ್ ಹಾಜರಾತಿ ಯೋಜನೆ ಮೇ 1, 2026 ರಿಂದಲೇ ಜಾರಿಯಲ್ಲಿದ್ದರೂ, ಇನ್ನೂ ಅನೇಕ ಸಿಬ್ಬಂದಿಗಳು ಆಪ್ ನಲ್ಲಿ ನೋಂದಣಿ ಮಾಡಿಕೊಂಡಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಇನ್ನೂ ರಿಜಿಸ್ಟರ್ ಮಾಡಿಕೊಳ್ಳದ ನೌಕರರಿಗೆ ತಕ್ಷಣವೇ ನೋಂದಾಯಿಸಿಕೊಳ್ಳಲು ಸೂಚಿಸಿದೆ.
ಇದುವರೆಗೆ ಆಪ್ ಬಳಸದ ಸಿಬ್ಬಂದಿಗಳನ್ನು ಗುರುತಿಸಿ, ಅವರಿಂದ ಕೂಡಲೇ ಹಾಜರಾತಿ ದಾಖಲಿಸುವಂತೆ ನೋಡಿಕೊಳ್ಳಲು ಎಲ್ಲಾ ಘಟಕ ಅಧಿಕಾರಿಗಳಿಗೆ (Unit Officers) ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.













