ಕಡಬ: ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ ಮತ್ತು ಕಾಂಟ್ಯಾಕ್ಟ್ ಲೆನ್ಸ್ ಸೆಂಟರ್ ಅಭಯ್ ಒಪ್ಟಿಶಿಯನ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಡಿ.08. ಇಲ್ಲಿನ ಪಂಜ ರಸ್ತೆಯಲ್ಲಿರುವ ಸೂರ್ಯ ಕಾಂಪ್ಲೆಕ್ಸ್‌ನಲ್ಲಿ ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ ಮತ್ತು ಕಾಂಟೆಕ್ಟ್ ಲೆನ್ಸ್ ಸೆಂಟರ್ ಅಭಯ್ ಒಪ್ಟಿಶಿಯನ್ಸ್ ಸೋಮವಾರದಂದು ಶುಭಾರಂಭಗೊಂಡಿತು.

ಸಿಪಿಸಿಆರ್,ಐನ ಹಿರಿಯ ತಾಂತ್ರಿಕ ವಿಜ್ಞಾನಿ ಗೋಪಾಲಕೃಷ್ಣ ಎ.ಎಸ್. ಅವರು ದೀಪ ಬೆಳಗಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿ, ಕಂಪ್ಯೂಟರೀಕೃತ ಕಣ್ಣಿನ ಪರೀಕ್ಷೆ ಮತ್ತು ಕಾಂಟೆಕ್ಟ್ ಲೆನ್ಸ್ ಸೆಂಟರ್ ಕಡಬದಲ್ಲಿ ಆಧುನಿಕ ಯಂತ್ರೋಪಕರಣದೊಂದಿಗೆ ಪ್ರಾರಂಭವಾಗಿರುವುದು ಸಂತಸದ ವಿಚಾರ. ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಇಂತಹ ವ್ಯವಸ್ಥೆಗಳು ಪ್ರಾರಂಭವಾಗಿರುವುದರಿಂದ ಇಲ್ಲಿಯ ಜನತೆಗೆ ಪ್ರಯೋಜನವಾಗಲಿ ಎಂದು ಹೇಳಿ ಶುಭ ಹಾರೈಸಿದರು. ಕಡಬ ವಿ.ಹಿಂ.ಪ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ ಕಣ್ಣಿನ ಪರೀಕ್ಷಾ ವಿಭಾಗವನ್ನು ಉದ್ಘಾಟಿಸಿ ಶುಭ ಹಾರೈಸಿದರು. ವೇದಮೂರ್ತಿ ತಂತ್ರಿಗಳಾದ ಅಣ್ಣಪ್ಪ ಭಟ್ ಪುತ್ತೂರು, ಅರ್ಚಕ ಜನಾರ್ದನ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಸತ್ಯೇಂದ್ರ ಶೆಣೈ, ನರೇಶ್ ಕುಮಾರ್, ಶ್ರೀಮತಿ ವಸುಧಾ ಉಪಸ್ಥಿತರಿದ್ದರು. ಮಿಥುನ್ ಕುಮಾರ್ ಎಚ್. ಅವರು ಅತಿಥಿಗಳನ್ನು ಸ್ವಾಗತಿಸಿದರು.

Also Read  ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ಇಲ್ಲದಿರುವುದು ಹಾಗು ಕೌಟಂಬಿಕ ಕಲಹಗಳು ಆಗುತ್ತಿದ್ದರೆ ಈ ಒಂದು ನಿಯಮ ಪಾಲಿಸಿ

error: Content is protected !!
Scroll to Top