ಪುತ್ತೂರು: ಅಕ್ರಮ ಮರ ಸಾಗಾಟ ➤ ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 05: ಅಕ್ರಮ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆದು ನಿಲ್ಲಿಸಿ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದ್ದು, ಆರೋಪಿಗಳು ಪರಾರಿಯಾದ ಘಟನೆ ಪುತ್ತೂರು ಪಾಣಾಜೆ ರಸ್ತೆಯ ಕೈಕಾರ ಎಂಬಲ್ಲಿ ನಡೆದಿದೆ.

 

 

ಲಾರಿಯಲ್ಲಿ ವಿವಿಧ ಜಾತಿಯ 62 ದಿಮ್ಮಿಗಳು ಹಾಗೂ ಒಟ್ಟು ರೂ.4 ಲಕ್ಷ ಅಂದಾಜಿನ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಯವರ ನಿರ್ದೇಶನದಂತೆ ಪುತ್ತೂರು ವಲಯಾರಣ್ಯಧಿಕಾರಿಯವರು ತನಿಖೆ ಕೈಗೆತ್ತಿಕೊಂಡಿದ್ದಾರೆ.

 

Scroll to Top