(ನ್ಯೂಸ್ ಕಡಬ) newskadaba.com ಸುಳ್ಯ, ಡಿ. 05: ಸುಳ್ಯದ ಕೃಷಿ ಇಲಾಖಾ ಕಛೇರಿಯಲ್ಲಿ ಇಂದು ದ.ಕ ಜಿ.ಪಂ ಕೃಷಿ ಇಲಾಖೆಯ ವತಿಯಿಂದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯ ಕಾರ್ಯಕ್ರಮ ಜರುಗಿತು.
ವಿಶ್ವ ಮಣ್ಣು ದಿನಾಚರಣೆಯ ಕುರಿತು ರೈತರಿಗೆ ಸುಳ್ಯ ಕೃಷಿ ಇಲಾಕೆಯ ತಾಂತ್ರಿಕ ಕೃಷಿ ಅಧಿಕಾರಿ ಮೋಹನ ನಂಗಾರು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಆತ್ಮ ಯೋಜನೆಯ ಅಧಿಕಾರಿ ಪ್ರಶಾಂತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತಾಲೂಕಿನ ಹಲವು ಕೃಷಿಕರು ಉಪಸ್ಥಿತರಿದ್ದು, ಮಾಹಿತಿ ಪಡೆದುಕೊಂಡರು. ಕೃಷಿ ಇಲಾಖೆಯ ಸಿಬ್ಬಂದಿ ಈಶ್ವರ ರವರು ಸ್ವಾಗತಿಸಿದರು.