ಬಂಟ್ವಾಳ: ಎರಡೆರಡು ಪಾಸ್ ಪೋರ್ಟ್ ಪಡೆದು ವಂಚಿಸಿದ ಆರೋಪಿ ವಿರುದ್ದ ಕೇಸು ದಾಖಲು



(ನ್ಯೂಸ್ ಕಡಬ) newskadaba.com ಬಂಟ್ವಾಳ, ಡಿ. 04: ಎರಡೆರಡು ಪಾಸ್ ಪೋರ್ಟ್ ಮಾಡಿಸಿಕೊಂಡು ಅಪರಾಧವೆಸಗಿದ ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಸಂಗಬೆಟ್ಟು ಗ್ರಾಮದ ಕಲ್ಕುರಿ ನಿವಾಸಿ ಲ್ಯಾನ್ಸಿ ಸಿಕ್ವೇರಾ(50) ಎಂದು ಗುರುತಿಸಲಾಗಿದೆ.





 

 

ಈತ 2002 ರ ನವೆಂಬರ್ 15 ರಂದು ಮುಂಬೈನಲ್ಲಿ ಪಾಸ್ ಪೋರ್ಟ್ ಪಡೆದಿದ್ದು, ಇದಕ್ಕಿಂತ ಮೊದಲು ಬೆಂಗಳೂರಿನಿಂದ ಪಾಸ್ ಪೋರ್ಟ್ ಪಡೆದಿದ್ದ. ಎರಡು ಪಾಸ್ ಪೋರ್ಟ್ ಗಳಲ್ಲಿ ಬೇರೆ ಬೇರೆ ಮಾಹಿತಿಯನ್ನು ನೀಡಿದ್ದು, ಈತನ ವಿರುದ್ಧ ದ.ಕ ಜಿಲ್ಲಾ ಎಸ್ಪಿ ಅವರ ಮೂಲಕ ಬೆಂಗಳೂರು ಪ್ರಾದೇಶಿಕ ಪಾಸ್ ಪೋರ್ಟ್ ಕಛೇರಿಯ ಸಹಾಯಕ ಅಧಿಕಾರಿ ದೂರು ನೀಡಿದ್ದರು. ಇದೀಗ ಆರೋಪಿಯ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






 

error: Content is protected !!
Scroll to Top