ಉಳ್ಳಾಲ : ರಸ್ತೆ ದಾಟುತ್ತಿದ್ದಾಗ ಮಗುವಿನ ಮೇಲೆ ಚಲಿಸಿದ ಟ್ಯಾಂಕರ್



(ನ್ಯೂಸ್ ಕಡಬ) newskadaba.com ಉಳ್ಳಾಲ, ಡಿ. 01: ಉಳ್ಳಾಲದಲ್ಲಿ ತಾಯಿ ಮತ್ತು ಮಕ್ಕಳು ರಸ್ತೆ ದಾಟುತ್ತಿದ್ದ ವೇಳೆ ಮಗುವಿನ ಮೇಲೆ ಟ್ಯಾಂಕರ್ ಚಲಿಸಿದ ಪರಿಣಾಮ ನಾಲ್ಕು ವರ್ಷದ ಮಗು ಗಂಭೀರ ಗಾಯಗೊಂಡಿರುವ ಘಟನೆ ಉಳ್ಳಾಲ ಬೈಲಿನಲ್ಲಿ ನಡೆದಿದೆ.





 

ಉಳ್ಳಾಲ ಬೈಲಿನ ಬಾಕಿಮಾರಿನಲ್ಲಿ ವಾಸವಿದ್ದ ನಾಲ್ಕು ವರ್ಷದ ಕೃಷ್ಣ ಎಂಬ ಮಗು ಗಂಭೀರವಾಗಿ ಗಾಯಗೊಂಡಿದೆ. ಮಗು ತನ್ನ ತಾಯಿ ಚಿಕ್ಕಮ್ಮ ಹಾಗೂ ಇಬ್ಬರು ಅಕ್ಕಂದಿರ ಜೊತೆ ರಸ್ತೆ ದಾಟುತ್ತಿದ್ದ ವೇಳೆ ತೊಕ್ಕೊಟ್ಟಿನಿಂದ ಉಳ್ಳಾಲಕ್ಕೆ ಬರುತ್ತಿದ್ದ ನೀರಿನ ಟ್ಯಾಂಕರ್, ನೋಡಾ ನೋಡುತ್ತಿದ್ದಂತೆಯೇ ಮಗುವಿನ ಮೇಲೆ ಹರಿದಿದೆ. ಪರಿಣಾಮ ಮಗುವಿನ ಕಾಲಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಆಗಮಿಸಿ ಚಾಲಕನನ್ನು ಬಂಧಿಸಿದ್ದಾರೆ.






 

error: Content is protected !!
Scroll to Top